ವಿಜಯಸಾಕ್ಷಿ ಸುದ್ದಿ, ಗದಗ: ಮಹಾವಿದ್ಯಾಲಯದ ವಿದ್ಯುನ್ಮಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಪ್ರಕಾಶ ಮರಕುಂಬಿ ಅವರು ಧಾರವಾಡದ ಎಸ್.ಡಿ.ಎಮ್. ಕಾಲೇಜ್ ಆಫ್ ಇಂಜಿನಿಯರಿAಗ್ & ಟೆಕ್ನಾಲಜಿಯ ಸಂಶೋಧನಾ ಕೇಂದ್ರದಿAದ ಡಾ. ಸತೀಶ ಬೈರಣ್ಣವರ ಇವರ ಮಾರ್ಗದರ್ಶನದಲ್ಲಿ `ಎಫೀಶಿಯಂಟ್ ಮೆಡಿಕಲ್ ಇಮೇಜ್ ಆಥಂಟಿಕೇಶನ್ ಅಂಡ್ ಇಟ್ಸ್ ಇಂಪ್ಲಿಮೆಂಟೇಶನ್ ಇನ್ ಟೆಲಿರೆಡಿಯಾಲಜಿ’ ಎನ್ನವ ವಿಷಯದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದು, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಈ ಮಹಾಪ್ರಬಂಧಕ್ಕೆ ಪಿಎಚ್ಡಿ ಪ್ರದಾನ ಮಾಡಿದೆ.
ಮೆಕ್ಯಾನಿಕಲ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಮೆಹಬೂಬ್ಸುಬಹಾನಿ ಆರ್.ಅಳವಂಡಿ ಅವರು ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ಡಿ.ಎಂ. ಗೌಡರ ಇವರ ಮಾರ್ಗದರ್ಶನದಲ್ಲಿ `ಇನ್ವೆಸ್ಟಿಗೇಷನ್ ಆಪ್ ಮೈಕ್ರೋಸ್ಟ್ರಕ್ಚರಲ್, ಮೆಕ್ಯಾನಿಕಲ್ ಅಂಡ್ ವಿಯರ್ ಬಿಹೇವಿಯರ್ ಆಫ್ ಸ್ಪೇಸ್ ಫಾರ್ಮ್ಡ್ ಹೈಪರ್ ಯುಟೆಕ್ಟಿಕ್ ಎಎಲ್ಎಸ್ಐ ಅಲಾಯ್ ವಿಥ್ ದಿ ಎಡಿಷನ್ ಆಫ್ ನಿಕ್ಕೆಲ್ ಅಂಡ್ ಕಾಪರ್’ ಎನ್ನವ ಮಹಾಪ್ರಬಂಧವನ್ನು ಮಂಡಿಸಿದ್ದು, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಈ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪ್ರದಾನ ಮಾಡಿದೆ.
ಮೆಕ್ಯಾನಿಕಲ್ ವಿಭಾಗದ ಇನ್ನೋರ್ವ ಸಹಾಯಕ ಪ್ರಾಧ್ಯಾಪಕ ಸೈಯದ್ ಹಸನ್ ಖಾಜಿ ಇವರು ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಸಂಶೋಧನಾ ಕೇಂದ್ರದಲ್ಲಿ ಪ್ರಾಧ್ಯಾಪಕರಾದ ಡಾ. ಡಿ.ಎಂ. ಗೌಡರ ಇವರ ಮಾರ್ಗದರ್ಶನದಲ್ಲಿ `ಇನ್ವೆಸ್ಟಿಗೇಷನ್ ಆಫ್ ಮೈಕ್ರೋಸ್ಟ್ರಕ್ಚರಲ್, ಮೆಕ್ಯಾನಿಕಲ್ ಅಂಡ್ ಟ್ರೈಬಾಲಜಿಕಲ್ ಬಿಹೇವಿಯರ್ ಆಫ್ ಹೈಪರ್ ಯುಟೆಕ್ಟಿಕ್ ಎಎಲ್ಎಸ್ಐ ಅಲಾಯ್ ವಿಥ್ ದಿ ಎಡಿಷನ್ ಆಫ್ ಟಿಟಾನಿಯಂ ಪ್ರೊಡ್ಯೂಸ್ಡ್ ಬೈ ಸ್ಪ್ರೇ ಫಾರ್ಮಿಂಗ್ ಪ್ರೊಸೆಸ್’ ಎನ್ನವ ಮಹಾಪ್ರಬಂಧವನ್ನು ಮಂಡಿಸಿದ್ದು, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಈ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪ್ರದಾನ ಮಾಡಿದೆ.
ಇವರ ಈ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ ಪ್ರಾಂಶುಪಾಲರಾದ ಡಾ. ಎಂ. ಎಂ. ಅವಟಿ, ಮಾರ್ಗದರ್ಶಕರಾದ ಡಾ. ಡಿ.ಎಂ. ಗೌಡರ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಡಿ. ರೇವಣಕರ್, ವಿದ್ಯುನ್ಮಾನ ವಿಭಾಗದ ಮುಖ್ಯಸ್ಥರಾದ ಪ್ರೊ. ಜಗದೀಶ ಶಿವನಗುತ್ತಿ ಸೇರಿದಂತೆ ಎಲ್ಲ ವಿಭಾಗದ ಮುಖ್ಯಸ್ಥರು, ಎಲ್ಲ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.