ಜ 12ರಂದು ಶ್ರೀ ಜಯದೇವ ಜಗದ್ಗುರುಗಳ ಪ್ರಣವ ಮಂಟಪ ಲೋಕಾರ್ಪಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿಜಯಪುರ ಜಿಲ್ಲೆಯ ಜಿ.ಪಂ ಹತ್ತಿರದ ವನಶ್ರೀ ಸಂಸ್ಥಾನಮಠದಲ್ಲಿ ಪರಮಪೂಜ್ಯ ಶ್ರೀ ಜಯದೇವ ಜಗದ್ಗುರುಗಳ ಪ್ರಣವ ಮಂಟಪ(ಗದ್ದುಗೆ) ಲೋಕಾರ್ಪಣೆ ಹಾಗೂ 8ನೇ ಪುಣ್ಯತಿಥಿ ಸಮಾರಂಭ ಜನವರಿ 12ರಂದು ಮಧ್ಯಾಹ್ನ 12ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಗಾಣಿಗ ವಿದ್ಯಾವರ್ಧಕ ಟ್ರಸ್ಟ್ನ ಕಟ್ಟಡ ಸಮಿತಿ ಸದಸ್ಯ ಅಶೋಕ ಮಂದಾಲಿ ತಿಳಿಸಿದ್ದಾರೆ.

Advertisement

ವಿಜಯಪುರ ವನಶ್ರೀ ಸಂಸ್ಥಾನಮಠದ ಡ. ಜಯಬಸವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಯರಹೊಸಳ್ಳಿ ರೆಡ್ಡಿ ಗುರುಪೀಠದ ಶ್ರೀ ಹೇಮ-ವೇಮ ಮಹಾಸ್ವಾಮಿಗಳು, ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಚಿತ್ತರಗಿ-ಇಲಕಲ್ ಶ್ರೀ ಗುರುಮಹಾಂತ ಮಹಾಸ್ವಾಮಿಗಳು, ಹಿರೇರೂಗಿ ಮುಕ್ತಿಮಂದಿರದ ಶಿವಯೋಗಿನಿ ಮಾತೋಶ್ರೀ ಸುಗಲಾದೇವಿ, ಆಲೂರು-ಕಳಕಾಪೂರದ ಶ್ರೀ ಶಂಕರಾನಂದ ಮಹಾಸ್ವಾಮಿಗಳು, ಶ್ರೀ ಸೋಮೇಶ್ವರ ಮಹಾಸ್ವಾಮಿಗಳು ಪಾಲ್ಗೊಳ್ಳುವರು. ಜಗದ್ಗುರು ಶ್ರೀ ಜಯದೇವ ಶಿವಯೋಗೇಶ್ವರ ಟ್ರಸ್ಟ್ ನಅಧ್ಯಕ್ಷರಾದ ಸಿದ್ದಮುತ್ಯಾ ಅಧ್ಯಕ್ಷತೆ ವಹಿಸುವರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹಾಗೂ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಆವರು ಗುರುಭವನದ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡುವರು.

ಮಾಜಿ ಮುಖ್ಯಮಂತ್ರಿಗಳು, ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕ ಲಕ್ಷö್ಮಣ ಸವದಿ ಹಾಗೂ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರಮ ಪೂಜ್ಯ ಜಯದೇವ ಜಗದ್ಗುರು ವೃತ್ತವನ್ನು ಅನಾವರಣಗೊಳಿಸುವರು.

ವಿಜಯಪುರ ಲೋಕಸಭೆ ಕ್ಷೇತ್ರದ ಸಂಸದ ರಮೇಶ ಜಿಗಜಿಣಗಿ, ಬಾಗಲಕೋಟೆ ಲೋಕಸಭೆ ಕ್ಷೇತ್ರದ ಸಂಸದ ಪಿ.ಸಿ. ಗದ್ದಿಗೌಡ್ರ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ, ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಧೋಂಡಿಬಾ ಕಟಕಧೋಂಡ, ಸಿಂಧಗಿ ಶಾಸಕ ಅಶೋಕ ಮಲ್ಲಪ್ಪ ಮನಗೂಳಿ, ಅಖಿಲ ಭಾರತ ಗಾಣಿಗ ಸಮಾಜ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಎಸ್.ಲೋಣಿ ಪಾಲ್ಗೊಳ್ಳುವರು.

ಗದಗ ಜಿಲ್ಲೆಯ ಗಾಣಿಗ ಸಮಾಜ ಸಂಘದ ಪದಾಧಿಕಾರಿಗಳು, ಸದಸ್ಯರು, ಗಾಣಿಗ ಸಮಾಜದ ಮುಖಂಡರು, ಗುರುಹಿರಿಯರು ಪಾಲ್ಗೊಳ್ಳಬೇಕು ಎಂದು ಅಖಿಲ ಭಾರತ ಗಾಣಿಗ ವಿದ್ಯಾವರ್ಧಕ ಟ್ರಸ್ಟ್ ನಕಟ್ಟಡ ಸಮಿತಿ ಸದಸ್ಯ ಅಶೋಕ ಮಂದಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತಿಥಿಗಳಾಗಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಆನಂದ ನ್ಯಾಮಗೌಡ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಜಿ.ಎಸ್. ನ್ಯಾಮಗೌಡ, ಬಿ.ಜಿ. ಪಾಟೀಲ, ಅಖಿಲ ಭಾರತ ಗಾಣಿಗ ಸಮಾಜ ಸಂಘದ ಗೌರವಾಧ್ಯಕ್ಷ ಡಾ. ಶೇಖರ ಸಜ್ಜನ, ಅಧ್ಯಕ್ಷರಾದ ಗುರಣ್ಣ ಗೋಡಿ, ಜಗದ್ಗುರು ಶ್ರೀ ಜಯದೇವ ಶಿವಯೋಗೇಶ್ವರ ಟ್ರಸ್ಟ್ನ ಕಾರ್ಯದರ್ಶಿ ಎನ್.ಎಸ್. ಲೋಣಿ, ಖಜಂಚಿ ಎಸ್.ಎಸ್. ಶಿರಾಡೋಣಿ ಹಾಗೂ ಗದಗ ಜಿಲ್ಲಾ ಗಾಣಿಗ ಸಮಾಜ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಿಂಗಿ ಪಾಲ್ಗೊಳ್ಳುವರು.


Spread the love

LEAVE A REPLY

Please enter your comment!
Please enter your name here