ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮ ಇನ್ನೇನು ಕ್ಲೈಮ್ಯಾಕ್ಸ್ ಹಂತ ತಲುಪುತ್ತಿದೆ. ಇನ್ನೆರಡು ವಾರಗಳಲ್ಲಿ ‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿರೋ 9 ಸ್ಪರ್ಧಿಗಳಲ್ಲಿ ಜೋರಾದ ಪೈಪೋಟಿ ನಡೆದಿದೆ. ಈ ವಾರವಂತೂ ಸ್ಪರ್ಧಿಗಳಿಗೆ ತುಂಬಾನೇ ಮುಖ್ಯವಾಗಿವೆ. ಹೀಗಾಗಿ ಸ್ಪರ್ಧಿಗಳು ಸಖತ್ ಆಗಿ ಆಡುತ್ತಿದ್ದಾರೆ.
ಇನ್ನೂ ಈ ವಾರ ಒಂದು ಟಾಸ್ಕ್ ನೀಡಲಾಗಿತ್ತು. ಟಬ್ ಮಾದರಿಯ ಆಕೃತಿಯನ್ನು ಗಾರ್ಡನ್ ಏರಿಯಾದಲ್ಲಿ ಇಡಲಾಗಿತ್ತು. ಮೇಲೆ ಅದನ್ನು ಕಂಬಿಗಳಿಂದ ಮುಚ್ಚಲಾಗಿತ್ತು. ಇದರ ಒಳಗೆ ಸ್ಪರ್ಧಿಗಳು ಇಳಿಯಬೇಕು. ಇದರಲ್ಲಿ ನಿರಂತರವಾಗಿ ನೀರು ಬರುತ್ತಾ ಇರುತ್ತದೆ.
ತಂಡದ ಮತ್ತೋರ್ವ ಸ್ಪರ್ಧಿ ನೀರನ್ನು ಎತ್ತಿ ಹಾಕಬೇಕು. ಮಂಜು ಅವರು ಟಬ್ನಲ್ಲಿ ಮಲಗಿದರೆ, ಗೌತಮಿ ನೀರನ್ನು ಎತ್ತಿ ಹಾಕಿದರು. ಅತ್ತ ಭವ್ಯಾ ಅವರು ನೀರನ್ನು ತೆಗೆಯುವ ಕಾಯಕದಲ್ಲಿ ತೊಡಗಿದರೆ ಮೋಕ್ಷಿತಾ ಟಬ್ನಲ್ಲಿ ಮಲಗಿದರು.
ನೀರು ತುಂಬುತ್ತಾ ಬಂದಂತೆ ಮಂಜು ಅವರಿಗೆ ಉಸಿರುಗಟ್ಟಲು ಆರಂಭ ಆಯಿತು. ಅವರು ಟಾಸ್ಕ್ನ ಬಿಟ್ಟೇ ಬಿಟ್ಟರು. ಮೋಕ್ಷಿತಾ ಅವರು ಟಾಸ್ಕ್ನ ಗೆದ್ದರು. ಇದನ್ನು ಭವ್ಯಾ ಸಂಭ್ರಮಿಸಿದರು. ಮೋಕ್ಷಿತಾ ಕೂಡ ಮಹತ್ವದ ಘಟ್ಟದಲ್ಲಿ ಮಂಜು ಎದುರು ಗೆದ್ದೆನಲ್ಲ ಎನ್ನುವ ಖುಷಿಯಲ್ಲಿ ಕುಣಿದರು. ಅವರಿಗೆ ಆನಂದ ಭಾಷ್ಪವೇ ಬಂತು.