ಚಿಕ್ಕಮಗಳೂರು : ಕರ್ನಾಟಕದ ಇತಿಹಾಸದಲ್ಲಿಯೇ ಮೊದಲು ಎನ್ನುವಂತೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಮ್ಮುಖದಲ್ಲೇ ಮೋಸ್ಟ್ ವಾಂಟೆಡ್ 6 ನಕ್ಸಲರು ಶರಣಾಗತಿಯಾಗಿದ್ದಾರೆ. ಶರಣಾದ ಎಲ್ಲರೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಇನ್ನೂ ಇದರ ನಡುವೆಯೇ ಗನ್‌ಗಳು ಪತ್ತೆಯಾಗಿವೆ.
ಹೌದು ಜಿಲ್ಲೆಯ ಕಿತ್ತಲೇಗಂಡಿ ಕಾಡಿನಲ್ಲಿ 5 ಗನ್‌ಗಳು ಪತ್ತೆಯಾಗಿವೆ. ಎಕೆ 56, 303ಕೋವಿ, ಒಂದು ಪಿಸ್ತೂಲ್ ಮತ್ತು 100ಕ್ಕೂ ಹೆಚ್ಚು ಗುಂಡುಗಳು ಜಯಪುರ ಸಮೀಪದ ಕಿತ್ತಲೆಗಂಡಿ ಕಾಡಿನಲ್ಲಿ ಪತ್ತೆಯಾಗಿವೆ.
ಗನ್‌ಗಳು ಯಾರದ್ದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸಿಕ್ಕಿರುವ ಗನ್‌ಗಳು ನಕ್ಸಲ್‌ರಿಗೆ ಸೇರಿದ್ದು ಎಂಬ ಶಂಕೆ ವ್ಯಕ್ತವಾಗಿದೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ಠಾಣಾ ವ್ಯಾಪ್ತಿಯಲ್ಲಿ ಗನ್‌ಗಳು ಪತ್ತೆಯಾಗಿವೆ. ಶರಣಾಗಲು ಬರುವಾಗ ತಮ್ಮ ಬಳಿ ಇದ್ದ ಶಸ್ತ್ರಾಸ್ತ್ರ, ಮದ್ದು ಗುಂಡುಗಳನ್ನು ಕಾಡಿನ ನಡುವೆ ಭೂಮಿಯೊಳಗೆ ಹೂತಿಟ್ಟಿದ್ದರು ಎನ್ನಲಾಗಿದೆ. ಸದ್ಯ ಆಯುಧ ಆ್ಯಕ್ಟ್ನ ಅಡಿಯಲ್ಲಿ ಅಪರಿಚತರಿಗೆ ಸೇರಿದ್ದು ಎಂದು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.