ರೈತರ ಹೋರಾಟಕ್ಕೆ ಕರವೇ ಬೆಂಬಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಸಂಜೀವಿನಿ ಸ್ವ-ಸಹಾಯ ಸಂಘ ಎನ್‌ಆರ್‌ಎಲ್‌ಎಂ ನೇತೃತ್ವದಲ್ಲಿ ರೈತರ ಕಡಲೆ ಬೆಳೆ ಖರೀದಿ ಮಾಡಿ ಹಣ ಕೊಡದೆ ವಂಚನೆ ಮಾಡಿದ ಗದಗ ಜಿಲ್ಲಾ ಸಂಜೀವಿನಿ ಒಕ್ಕೂಟದ ವಿರುದ್ಧ ಹಾಗೂ ಗದಗ ಜಿಲ್ಲಾಡಳಿತದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರೈತರಿಗೆ ಹಾಗೂ ರೈತ ಸಂಘಟನೆಗೆ ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾಧ್ಯಕ್ಷ ಹನುಮಂತಪ್ಪ ಎಚ್.ಅಬ್ಬಿಗೇರಿ ನೇತೃತ್ವದಲ್ಲಿ ರೈತರಿಗೆ ಹಾಗೂ ರೈತ ಸಂಘಟನೆಗೆ ಬೆಂಬಲವನ್ನು ಸೂಚಿಸಿದರು.

Advertisement

ಈ ಸಂದರ್ಭದಲ್ಲಿ ಗದಗ ತಾಲೂಕಾಧ್ಯಕ್ಷ ಮುತ್ತಣ್ಣ ಚೌಡನ್ನವರ, ಜಿಲ್ಲಾ ರೈತ ಘಟಕದ ಅಧ್ಯಕ್ಷ ಶರಣಪ್ಪ ಕರಮುಡಿ, ಬೆಟಗೇರಿ ನಗರ ಘಟಕದ ಅಧ್ಯಕ್ಷ ಸಲೀಂ ಶಿರವಾರ, ಗೌಸ ಶಿರಹಟ್ಟಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ತೌಸಿಫ ಢಾಲಾಯತ, ಜಿಲ್ಲಾ ವಕ್ತಾರರಾದ ವಿರೂಪಾಕ್ಷ ಹಿತ್ತಲಮನಿ, ಕಾರ್ಯಕರ್ತರು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here