ಪ್ರತಿಯೊಂದು ಸಾಧನೆಗೆ ಕ್ರೀಡೆ ಸಹಕಾರಿ: ಲಿಂಗರಾಜ ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಹಿರಿಯರ ಕಾಲದಿಂದಲೂ ಗ್ರಾಮೀಣ ಆಟಗಳಿಗೆ ಮಹತ್ವ ನೀಡುತ್ತಾ ಬಂದಿದ್ದಾರೆ. ಇದರಿಂದ ಆರೋಗ್ಯ ವೃದ್ಧಿ, ಸದೃಢ ಮನಸ್ಸು ಮತ್ತು ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ. ಆರೋಗ್ಯ ಹಾಳಾದಲ್ಲಿ ಎಲ್ಲವನ್ನೂ ಕಳೆದುಕೊಂಡಂತೆ. ಆದ್ದರಿಂದ ನಮ್ಮ ಪ್ರತಿಯೊಂದು ಸಾಧನೆಗೆ ಕ್ರೀಡೆ ಸಹಕಾರಿಯಾಗುತ್ತದೆ. ಕ್ರೀಡಾಸಕ್ತಿಯೊಂದಿಗೆ ಮಾನಸಿಕ ಮತ್ತು ದೈಹಿಕವಾಗಿ ಸದೃಢ ಸಂಪತ್ತನ್ನು ಗಳಿಸೋಣ ಎಂದು ಬಿಜೆಪಿ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಹೇಳಿದರು.

Advertisement

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಗದಗ ಜಿಲ್ಲೆಯ ನೇತೃತ್ವದಲ್ಲಿ ರಾಷ್ಟ್ರೀಯ ಯುವದಿನ ಮತ್ತು ಆಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಬಡ್ಡಿ ಕ್ರೀಡಾಕೂಟದ 2ನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಗರ ಮಂಡಲದ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಅನಿಲ್ ಅಬ್ಬಿಗೇರಿ ಮಾತನಾಡಿ, ಜಿಲ್ಲೆಯ ಯುವ ಮೋರ್ಚಾ ಅಧ್ಯಕ್ಷರ ನೇತೃತ್ವದಲ್ಲಿ ಕ್ರಿಯಾಶೀಲವಾಗಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಯುವಕರ ಸಂಘಟನೆ ಮತ್ತು ಕ್ರೀಡಾಕೂಟಕ್ಕೆ ಬೇಕಾದ ಸಂಪೂರ್ಣ ವ್ಯವಸ್ಥೆಯನ್ನು ಪ್ರಬುದ್ಧವಾಗಿ ನಿರ್ವಹಿಸುತ್ತಾ ನಮ್ಮ ಕ್ರೀಡಾ ಆಸಕ್ತಿಗೆ ಶಕ್ತಿ ತುಂಬುತ್ತಿದ್ದಾರೆ. ಈ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಯುವಕ-ಯುವತಿಯರು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಕ್ರೀಡಸಾಧನೆ ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದರು.

ನಿಕಟಪೂರ್ವ ರೈತ ಮೋರ್ಚಾ ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಕಬಡ್ಡಿ ಪಟು ರಾಜು ಕುಲಕರ್ಣಿ ಮಾತನಾಡಿ, ಕಬಡ್ಡಿ ಕ್ರೀಡೆ ಒಂದು ದೇಸೀ ಆಟವಾಗಿದೆ. ಗ್ರಾಮೀಣ ಪ್ರತಿಭೆಗಳಿಗೆ ಮತ್ತು ಪ್ರಾದೇಶಿಕ ಆಟಗಳಿಗೆ ಮಹತ್ವ ನೀಡುವುದರಿಂದ ಕಳೆದು ಹೋದ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ. ಮಣ್ಣಿನ ಜೊತೆಗೆ ನೆಲದ ಮೇಲೆ ಆಟವಾಡುವುದರಿಂದ ದೈಹಿಕ ಸದೃಢತೆ ಹೆಚ್ಚಾಗುತ್ತದೆ. ದೇಸೀ ಕ್ರೀಡೆಗಳಿಗೆ ಮಹತ್ವ ನೀಡುವುದು ಯುವ ಮೋರ್ಚಾದ ಉದ್ದೇಶವಾಗಿದೆ ಎಂದರು.

ರೋಣ ಮಂಡಲದ ಅಧ್ಯಕ್ಷ ಉಮೇಶ್ ಅನ್ನುಪಾಟೀಲ್ ನಿರೂಪಿಸಿದರು. ಪ್ರಶಸ್ತಿ, ನಗದು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷಕ್ಕೆ ವಿತರಿಸಿದರು. ಜಿಲ್ಲಾ ಯುವ ಮೋರ್ಚಾ ಕಾರ್ಯಕರ್ತ ನವೀನ ಕುರ್ತಕೋಟಿ ವಂದಿಸಿದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗರಾಜ ಪಾಟೀಲ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ಜಿಲ್ಲಾ ಕೋಶಾಧ್ಯಕ್ಷ ನಾಗರಾಜ ಕುಲಕರ್ಣಿ, ನಗರ ಮಂಡಲದ ಅಧ್ಯಕ್ಷ ಅನಿಲ್ ಅಬ್ಬಿಗೇರಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸವರಾಜ್ ಇಟಗಿ, ಜಿಲ್ಲಾ ಪ್ರಕೋಷ್ಠದ ಸಂಚಾಲಕ ಶಶಿಧರ ದಿಂಡೂರ, ಜಿಲ್ಲಾ ರೈತ ಮೋರ್ಚಾದ ನಿಕಟಪೂರ್ವ ಅಧ್ಯಕ್ಷ ರಾಜು ಕುಲಕರ್ಣಿ, ರೋಣ ಮಂಡಲ ಮೋರ್ಚಾದ ಅಧ್ಯಕ್ಷ ಉಮೇಶ ಚನ್ನು ಪಾಟೀಲ, ಡಂಬಳ ಮಂಡಲದ ಯುವ ಮೋರ್ಚಾ ಅಧ್ಯಕ್ಷ ಪ್ರಕಾಶ ಕೊತ್ತಂಬರಿ, ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ನವೀನ ಕುರ್ತಕೋಟಿ, ಸಚಿನ್ ಮಡಿವಾಳರ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ ನರೇಗಲ್ಲ, ಗದಗ ನಗರ ಮಂಡಲ ಉಪಾಧ್ಯಕ್ಷ ಪ್ರವೀಣ ಹಡಪದ, ಆನಂದ್ ಗಡಗೇರಿ ಹಾಗೂ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಯುವಕರು, ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ಯುವತಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಶ್ರೀ ಶರಣಬಸವೇಶ್ವರ ಕಲಿಕೇರಿ (ಎ) ತಂಡ , ದ್ವಿತೀಯ ಸ್ಥಾನ ಶ್ರೀ ಶರಣಬಸವೇಶ್ವರ ಕಲಿಕೇರಿ (ಬಿ) ತಂಡ ಹಾಗೂ ತೃತೀಯ ಸ್ಥಾನವನ್ನು ಎಸ್.ಜೆ.ಜೆ.ಎಮ್ ಪಿಯು ಕಾಲೇಜು ತಂಡಗಳು ಪಡೆದುಕೊಂಡವು. ಉತ್ತಮ ರೈಡರ್ ಭವಾನಿ ಮನಕವಾಡ, ಉತ್ತಮ ಆಲ್ ರೌಂಡರ್ ಭಾಗ್ಯ ಬೂದಿಹಾಳ, ಉತ್ತಮ ಕ್ಯಾಚರ್ ಆಗಿ ಐಶ್ವರ್ಯ ಪರಮೇಶ್ವರ ಹೊರಹೊಮ್ಮಿದರು.

ಯುವಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸಿ.ಸಿ. ಪಾಟೀಲ ಅಭಿಮಾನಿ ಬಳಗ ಲಕ್ಕುಂಡಿ (ಎ) ತಂಡ, ದ್ವಿತೀಯ ಸ್ಥಾನ ರೈಲ್ವೇಸ್ ಗದಗ ಟೀಮ್ ಹಾಗೂ ತೃತೀಯ ಸ್ಥಾನವನ ಬಿ.ಪಿ.ಎಡ್ ಕಾಲೇಜು ತಂಡಗಳು ಪಡೆದುಕೊಂಡವು. ಉತ್ತಮ ರೈಡರ್ ವಿಷ್ಣು, ಉತ್ತಮ ಆಲ್‌ರೌಂಡರ್ ಸಂಗಮೇಶ್, ಉತ್ತಮ ಕ್ಯಾಚರ್ ಆಗಿ ಚಂದ್ರು ಕಂಬಳಿ ಗುರುತಿಸಿಕೊಂಡರು.


Spread the love

LEAVE A REPLY

Please enter your comment!
Please enter your name here