ಸಹಕಾರಿ ಸಂಘವನ್ನು ಬೆಳೆಸುವುದು ಸುಲಭವಲ್ಲ: ಜಗನಾಥನಂದ ಸ್ವಾಮಿಜೀ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಹಣದ ವ್ಯವಹಾರ ಅತ್ಯಂತ ಜವಾಬ್ದಾರಿಯ ಕೆಲಸ. ಹಣದ ಮೂಲಕ ಸಂಘವನ್ನು ಬೆಳೆಸುವುದು ಸುಲಭವಲ್ಲ. ಆದ್ದರಿಂದ ಹಣದ ವ್ಯವಹಾರದಲ್ಲಿ ಲೋಪ-ದೋಷ ಬರುವುದು ಸಹಜ. ಅದನ್ನು ಎಲ್ಲ ನಿದೇರ್ಶಕರು ಒಮ್ಮತದಿಂದ ಸರಿಪಡಿಸಿ ಸಾರ್ವಜನಿಕರಿಗೆ ಆರ್ಥಿಕ ನೆರವು ನೀಡುವುದರಿಂದ ಸಂಘದ ಆರ್ಥಿಕತೆ ಮತ್ತು ಸಂಘದ ಸದಸ್ಯರು ಹಾಗೂ ಸಂಘ ಎತ್ತರಕ್ಕೆ ಬೆಳೆಯುತ್ತದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಜಗನಾಥನಂದ ಸ್ವಾಮಿಜೀಯವರು ನುಡಿದರು.

Advertisement

ಆಶ್ರಮದ ಆವರಣದಲ್ಲಿ 2025ನೇ ಸಾಲಿನ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಮಾತನಾಡಿ, ಜನರಿಂದ ಜನರಿಗೋಸ್ಕರ ಜನರಿಗಾಗಿ ಆರ್ಥಿಕವಾಗಿ ನೆರವು ನೀಡುವುದೇ ಸಹಕಾರ ಸಂಘದ ಕೆಲಸ. ಸಹಕಾರ ಸಂಘಗಳ ರಚನೆಗೆ ನಮ್ಮ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದ ರಾಷ್ಟ್ರೀಯ ಸಹಕಾರ ಆಂದೋಲನದ ಮೂಲ ಪುರುಷ, ಸಹಕಾರಿ ರಂಗದ ಪಿತಾಮಹ ದಿ. ಶಿದ್ಧನಗೌಡ ಸಣ್ಣರಾಮನಗೌಡ ಪಾಟೀಲ ಹಾಗೂ ಸಹಕಾರಿ ರಂಗದ ಭೀಷ್ಮ ಕೆ.ಎಚ್. ಪಾಟೀಲ ಕೊಡುಗೆ ಅಪಾರ ಎಂದು ನುಡಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ರಾಜ್ಯ ಶಾರೀರಿಕ ಪ್ರಮುಖರಾದ ಮಹೇಶ ರೋಖಡೆ, ನೆರವು ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಹಾಗೂ ಸದಸ್ಯರಾದ ವಿಶ್ವನಾಥ ಅಂಗಡಿ, ಶಂಕರ ಕಾರದಕಟ್ಟಿ ರಾಚೋಟಿ ಕಾಡಪ್ಪನವರ, ನಾಗರಾಜ ತುಕೋಳ, ರವಿ ಜಟ್ಟನ್ನವರ, ಕಿರಣ ಹಿರೇಮಠ, ಸತೀಶ ಕುಂಬಾರ, ಶ್ರೀಕಾಂತ ಜವಳಿ, ಕಾರ್ತಿಕ ಶೆಟ್ಟರ, ಕಿರಣ ಶೆಟ್ಟರ, ಸಂತೋಷ ಪಾಟೀಲ, ವಿರೇಶ ಹಿರೇಮಠ, ಪ್ರದೀಪ ಹಿರೇಮಠ, ಪ್ರದೀಪ ಹುಡೇದ ಹಾಗೂ ಆಶ್ರಮದ ಭಕ್ತರು ಉಪಸ್ಥಿತರಿದರು. ಅಧ್ಯಕ್ಷ ವಿಶ್ವನಾಥ ಶೀರಿ ಸರ್ವರನ್ನು ಸ್ವಾಗತಿಸಿದರು, ಶಂಕರ ಕಾರದಕಟ್ಟಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here