ಬಿಗ್ ಬಾಸ್ ಸೀಸನ್ 11 ಕಾರ್ಯಕ್ರಮದ ಫೈನಾಲ್ ಕೊನೆ ಹಂತದಲ್ಲಿದೆ. ಹೀಗಾಗಿ ಒಬ್ಬೊಬ್ಬರೆ ಮನೆಯಿಂದ ಎಲಿಮಿನೇಟ್ ಆಗಿ ಹೊರ ಹೋಗುತ್ತಿದ್ದಾರೆ. ಅಂತೆಯೇ ಈ ವಾರ ಬಿಗ್ ಬಾಸ್ ಮನೆಯಿಂದ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಹೊರ ನಡೆದಿದ್ದಾರೆ.
106 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದ ಚೈತ್ರಾ ಕುಂದಾಪುರ ತಮ್ಮ ಆಟವನ್ನು ಮುಗಿಸಿ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದುಕೊಂಡು ಬಿಗ್ಬಾಸ್ ಮನೆಗೆ ಬಂದಿದ್ದ ಚೈತ್ರಾ ಕುಂದಾಪುರ ಅವರು ಕಿಚ್ಚನ ಮುಂದೆ ಕಣ್ಣೀರು ಹಾಕಿದ್ದು, ಬಿಗ್ಬಾಸ್ನಲ್ಲಿ ಸಾರ್ಥಕವಾಗಿ ಬದುಕಿದ್ದೇನೆ ಎಂದಿದ್ದಾರೆ.
ಬಿಗ್ಬಾಸ್ನಿಂದ ಎಲಿಮಿನೇಟ್ ಆಗಿ ವೇದಿಕೆಗೆ ಬಂದಿದ್ದ ಚೈತ್ರಾ ಕುಂದಾಪುರ ಅವರು ಕಿಚ್ಚನ ಮುಂದೆ ಕಣ್ಣೀರು ಹಾಕಿದ್ದಾರೆ. ಮೊದಲನೇ ವಾರ ಬಿಗ್ಬಾಸ್ ಮನೆಯಿಂದ ಆಚೆ ಬರಬಾರದು ಅಂತ ಅಂದುಕೊಂಡಿದ್ದೆ. ಆದರೆ ಇಷ್ಟು ದಿನ ಬಿಗ್ಬಾಸ್ ಮನೆಯಲ್ಲಿ ಇರುತ್ತೇನೆ ಅಂತ ಅಂದುಕೊಂಡಿದ್ದೇ. ಈಗ ಗೆದ್ದುಕೊಂಡೆ ಬಿಗ್ಬಾಸ್ ಮನೆಯಿಂದ ಆಚೆ ಹೋಗುತ್ತಿದ್ದೇನೆ ಅಂತ ಹೇಳಿದ್ದಾರೆ. ಹೇಗೆ ಬದುಕಬಹುದು ಅಂತ ಬಿಗ್ಬಾಸ್ ಮನೆಯಲ್ಲಿ ಕಲಿತೆ. ಇಲ್ಲಿಗೆ ಬಂದು ಇಷ್ಟು ಜನರ ಜೊತೆಗೆ ಹೇಗೆ ಬದುಕಬೇಕು ಅಂತ ಕಲಿತ್ತಿದ್ದೇನೆ. 105 ದಿನದ ಸಾರ್ಥಕವಾಗಿ ಬದುಕಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ.