ಕುಂಭಮೇಳಕ್ಕೆ ತೆರಳುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ!

0
Spread the love

ಪ್ರಯಾಗ್‌ರಾಜ್: 144 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳವಾದ ಮಹಾ ಕುಂಭಮೇಳಕ್ಕೆ ಪ್ರಯಾಗ್‌ರಾಜ್‌ನಲ್ಲಿ ವಿದ್ಯುಕ್ತ ಚಾಲನೆ ದೊರೆತಿದೆ. ಇದರ ಬೆನ್ನಲ್ಲೇ ಸೂರತ್‌ನಿಂದ ಛಾಪ್ರಾಕ್ಕೆ ತೆರಳುತ್ತಿದ್ದ ತಪತಿ ಗಂಗಾ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಮಹಾರಾಷ್ಟ್ರದ ಜಲಗಾಂವ್ ರೈಲು ನಿಲ್ದಾಣದ ಬಳಿ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

Advertisement

ರೈಲು ನಿಲ್ದಾಣದಿಂದ ರೈಲು ಮೂರ್ನಾಲ್ಕು ಕಿ.ಮೀ ದೂರ ಕ್ರಮಿಸಿದ ಬಳಿಕ ದುಷ್ಕರ್ಮಿಗಳಿಂದ ಈ ದಾಳಿ ನಡೆದಿದೆ. ಈ ದಾಳಿಯಲ್ಲಿ ರೈಲಿನ ಬಿ6 ಕೋಚ್​ನ ಕಿಟಿಕಿಗಳಿಗೆ ಹಾನಿಯಾಗಿದೆ.

ಇದರ ವಿಡಿಯೋಗಳನ್ನು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು. ಇದರಲ್ಲಿ ರೈಲಿಗೆ ಆಗಿರುವ ಹಾನಿಯನ್ನು ಗಮನಿಸಬಹುದಾಗಿದೆ ಹಾಗೂ ಪ್ರಯಾಣಿಕರಿಗೆ ಉತ್ತಮ ಭದ್ರತೆಯನ್ನು ಒದಗಿಸಲು ಪ್ರಯಾಣಿಕರು ರೈಲ್ವೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

30-45 ದಿನಗಳ ಕಾಲ ನಡೆಯುವ ಮಹಾಕುಂಭವು ಹಿಂದೂಗಳಿಗೆ ಹೆಚ್ಚಿನ ಮಹತ್ವವನ್ನು ಹೊಂದಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಪೂರ್ಣಿಮಾ ತಿಥಿಯು ಜನವರಿ 13 ರಂದು ಅಂದರೆ ಇಂದು ಬೆಳಗ್ಗೆ 5:03 ಕ್ಕೆ ಪ್ರಾರಂಭವಾಗಿದೆ ಮತ್ತು ತಿಥಿ ಜನವರಿ 14 ರಂದು ಬೆಳಗ್ಗೆ 3:56 ಕ್ಕೆ ಕೊನೆಗೊಳ್ಳುತ್ತದೆ.


Spread the love

LEAVE A REPLY

Please enter your comment!
Please enter your name here