ಗದಗ: ಜಿಲ್ಲೆಯಲ್ಲಿ ಡಕೋಟಾ ಬಸ್ಗಳ ಹಾವಳಿ ಜೋರಾಗಿದೆ. ಗದಗ ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಬಸ್ಗಳ ಟೈರ್ಗಳು ಉರುಳಿ ಬೀಳುತ್ತಿವೆ. ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಇದರಿಂದ ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿದೆ.
ಇದೀಗ ಗದಗ ನಗರದ ಮುಳಗುಂದ ನಾಕಾದಲ್ಲಿ ಹುಬ್ಬಳ್ಳಿಯಿಂದ ಹುನಗುಂದ ಕಡೆ ಹೊರಟಿದ್ದ ಬಸ್ ನಡು ರಸ್ತೆಯಲ್ಲಿ ಕೆಟ್ಟು ನಿಂತಿದೆ. ನಿರ್ವಾಹಕರು, ಪ್ರಯಾಣಿಕರು ನಡು ರಸ್ತೆಯಲ್ಲಿ ಬಸ್ ಅನ್ನು ತಳ್ಳಿದ್ದಾರೆ. ಎಲ್ಲೆಂದರಲ್ಲಿ ಕೆಟ್ಟು ನಿಲ್ಲೋತ್ತಿರೋ ಡಕೋಟಾ ಬಸ್ ಗಳ ವಿರುದ್ಧ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡ ಜನರು ಹಾಗೂ ಮದ್ಯಮ ವರ್ಗದ ಜನರು ಹೆಚ್ಚಾಗಿ ಸಂಚಾರ ಮಾಡುವುದು ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ. ಆದರೆ ಸಾರಿಗೆ ಸಂಸ್ಥೆ ಬಡ ಹಾಗೂ ಮದ್ಯಮ ವರ್ಗದ ಜನರ ಜೀವಕ್ಕೆ ಬೆಲೆ ಇಲ್ಲದ ಹಾಗೇ, ಡಕೋಟಾ ಬಸ್ ಗಳನ್ನು ರಸ್ತೆಗೆ ಇಳಿಸುತ್ತಿದೆ. ಇದರಿಂದಾಗಿ ಪ್ರಯಾಣಿಕರಿಗೆ ಸಂಕಷ್ಟ ಎದುರಾಗುತ್ತಿದೆ. ಸರಕಾರ ಎಚ್ಚೆತ್ತು ಇಂತಹ ಬಸ್ಗಳಿಗೆ ಕಡಿವಾಣ ಹಾಕಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕಿದೆ.