ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕ್ರಿಮಿನಲ್ʼಗಳಿಗೆ ಧೈರ್ಯ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಚಾಮರಾಜಪೇಟೆಯ ವಿನಾಯಕನಗರದಲ್ಲಿ ನಡೆದ ಹಸುಗಳ ಕೆಚ್ಚಲು ಕೋಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು,
ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕ್ರಿಮಿನಲ್ಗಳಿಗೆ ಧೈರ್ಯ ಬಂದಿದೆ. ಏನಾದರೂ ಆದ್ರೆ ರಕ್ಷಿಸಿಸುತ್ತಾರೆ ಅನ್ನೋ ಧೈರ್ಯ ಹುಟ್ಟಿಕೊಂಡಿದೆ. ಪರಿಣಾಮ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ ಎಂದರು. ಇನ್ನೂ ಸರ್ಕಾರ ಗಟ್ಟಿಯಾಗಿದ್ರೆ, ಈ ರೀತಿಯ ಘಟನೆಗಳು ನಡೆಯೋದಿಲ್ಲ.
ಸರ್ಕಾರದ ಸಂಪೂರ್ಣ ವೈಫಲ್ಯ ಆಗಿದೆ. ಅಮಾಯಕ ಹಸುಗಳ ಮೇಲೆ ಈ ರೀತಿ ಮಾಡುತ್ತಿದ್ದಾರೆ. ಇದರ ಬಗ್ಗೆ ಹೋರಾಟ ಮಾಡಿದ್ರೆ ಇದು ರಾಜಕೀಯ ಪ್ರೇರಿತ ಅಂತ ಸಿಎಂ ಅಸಡ್ಡೆಯಿಂದ ಮಾತನಾಡುತ್ತಾರೆ. ಹೀಗಾದ್ರೆ ಜನರ ಬದುಕು ಹೇಗೆ ಅನ್ನೋದನ್ನ ವಿಚಾರ ಮಾಡಬೇಕು. ಎಲ್ಲಾ ಕ್ರಿಮಿನಲ್ಗಳಿಗೆ ಕಾಂಗ್ರೆಸ್ ಸರ್ಕಾರ ಸ್ವರ್ಗ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.