ಹರಜಾತ್ರೆಗೆ ಮುಖ್ಯಮಂತ್ರಿಗಳಿಗೆ ಆಹ್ವಾನ: ಖಂಡನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಡಾವಣಗೇರೆ ಜಿಲ್ಲೆಯ ಹರಿಹರದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಹರಜಾತ್ರೆಗೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವುದು ಸಂವಿಧಾನ ಬಾಹಿರ ಎಂದು ಹೇಳಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಮಂತ್ರಿಸಿರುವುದು ದುರಾದೃಷ್ಟಕರ. ಇನ್ನು ಮುಂದೆ ನಮ್ಮ ಸಮಾಜದ ಯಾವುದೇ ಸಭೆ, ಸಮಾರಂಭ ಹಾಗೂ ಕಾರ್ಯಕ್ರಮಗಳಿಗೆ ಯಾರೂ ಕೂಡಾ ಆಮಂತ್ರಣವನ್ನು ನೀಡಬಾರದು. ಒಂದು ವೇಳೆ ಆಮಂತ್ರಿಸಿದರೆ ಅಂತಹ ಕಾರ್ಯಕ್ರಮಕ್ಕೆ ಬರುವ ಮುಖ್ಯಮಂತ್ರಿಗೆ ಘೇರಾವ್ ಹಾಕುವುದರ ಜೊತೆಗೆ ಕಪ್ಪುಪಟ್ಟಿ ಪ್ರದರ್ಶಿಸಲಾಗುವುದು ಎಂದು ಗದಗ ಜಿಲ್ಲಾ ಪಂಚಮಸಾಲಿ ಸಮಾಜದ ಹಿರಿಯರಾದ ಮೋಹನ ಮಾಳಶೆಟ್ಟಿ ಹೇಳಿದರು.

Advertisement

ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ ಗೌರವವಿದ್ದರೆ ಆತ್ಮಸಾಕ್ಷಿ ಇದ್ದರೆ ಪಂಚಮಸಾಲಿ ಸಮಾಜದ ಯಾವುದೇ ವೇದಿಕೆಗೆ ಹೋಗಬಾರದು ಎಂದರು.

ಪೂರ್ವಭಾವಿ ಸಭೆಯಲ್ಲಿ ಎಮ್.ಎಸ್. ಪರ್ವತಗೌಡ್ರ, ಈರಣ್ಣ ಬಾಳಿಕಾಯಿ, ಗಿರೀಶ ಸಂಶಿ, ವಕೀಲರು, ಜಿ.ಬಿ. ಹನಮನಾಳ, ವೀರಪಾಕ್ಷಗೌಡ ದೇಸಾಯಿಗೌಡ್ರ, ಈರಣ್ಣ ಬಾಳಿಕಾಯಿ, ವಿರೂಪಾಕ್ಷಪ್ಪ ಮಟ್ಟಿ, ಬಸವರಾಜ ದೇಸಾಯಿ, ಮಹೇಶ ಕರಿಬಿಷ್ಠಿ, ಮಾಹಾಂತೇಶ ನಲವಡಿ, ಅಯ್ಯಪ್ಪ ಅಂಗಡಿ, ಶಿವರಾಜಗೌಡ ಹಿರೇಮನಿಪಾಟೀಲ, ಬಸವರಾಜ ಮನಗುಂಡಿ, ರಮೇಶ ರೋಣದ, ಅಪ್ಪು ಮುಳವಾಡ, ಚಂದ್ರು ಪಾಟೀಲ್, ಈರಮ್ಮ ತಾಳಿಕೋಟಿ, ನಾಗರಾಜ್ ಗುರಿಕಾರ, ಮಂಜುನಾಥ ಬಾಣದ, ಚೇತನ ಅಬ್ಬಿಗೇರಿ, ಕುಮಾರ್ ಹೊಂಬಳ, ಶರಣಪ್ಪ ಗೊಳಗೊಳಕಿ, ಬಸವರಾಜ ಗುಡದೂರ, ಈರಣ್ಣ ಕುರ್ತಕೋಟಿ, ಮಂಜುನಾಥ ದಾಟನಾಳ, ಕೆ.ಎಸ್. ಲಕ್ಕುಂಡಿ ಮುಂತಾದವರು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here