ಧಾರವಾಡ: ತಾಲೂಕಿನ ದೇವಗಿರಿ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆಗೆ ಬೆಂಕಿ ಬಿದ್ದ ಹಿನ್ನೆಲೆ ಲಕ್ಷಾಂತರ ಮೌಲ್ಯದ ಕಬ್ಬು ಬೆಂಕಿಗಾಹುತಿಯಾದ ಘಟನೆ ಜರುಗಿದೆ.
Advertisement
ಇದೇ ಗ್ರಾಮದ ಸುಮಾರು 16 ಜನ ರೈತರಿಗೆ ಸೇರಿದ ಒಟ್ಟು 50 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿಗೆ ಬೆಂಕಿ ತಗುಲಿದೆ. ವಿದ್ಯುತ್ ತಂತಿಯ ಅವಘಡದಿಂದಾಗಿ ಈ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಊಹಿಸಲಾಗಿದೆ.
ಇನ್ನೂ ಇದು ವಿದ್ಯುತ್ ಅವಘಡದಿಂದಾಗಿಯೇ ಈ ಬೆಂಕಿ ಹೊತ್ತಿದೆಯಾ ಅಥವಾ ಬೇರೆ ಯಾವುದಾದರೂ ಕಾರಣದಿಂದ ಬೆಂಕಿ ಹೊತ್ತಿದೆಯಾ ಎಂಬುದು ತನಿಖೆಯಿಂದ ಸ್ಪಷ್ಟವಾಗಿ ಗೊತ್ತಾಗಬೇಕಿದೆ.