HomeGadag Newsಉಚಿತ ಕಂಪ್ಯೂಟರ್, ಹೊಲಿಗೆ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಉಚಿತ ಕಂಪ್ಯೂಟರ್, ಹೊಲಿಗೆ ತರಬೇತಿ ಕಾರ್ಯಕ್ರಮ ಉದ್ಘಾಟನೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಡಂಬಳ: ತರಬೇತಿ ಪಡೆಯಲು ಬಂದಿರುವ ಪ್ರತಿ ಮಹಿಳೆಯರು ಸ್ವಾಲಂಬಿಗಳಾಗಲು ಕಂಪ್ಯೂಟರ್ ಮತ್ತು ಹೊಲಿಗೆ ತರಬೇತಿಯನ್ನು ಪಡೆಯುವುದು ಅವಶ್ಯಕವಾಗಿದೆ. ಇದರ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ ಹೇಳಿದರು.

ಡಂಬಳ ಗ್ರಾಮದಲ್ಲಿ ರಮನ್ ಕಾಂತ ಮುಂಜಾಲ್ ಫೌಂಡೇಶನ್ ಮತ್ತು ಹಿರೋ ಪೂಚರ್ ಎನರ್ಜಿ ಪ್ಲಾಂಟ್ ಪಾಸಿಟೀವ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಂಪ್ಯೂಟರ್ ಮತ್ತು ಹೊಲಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೀರೋ ಕಂಪನಿಯ ಮುಖ್ಯ ಸಿಎಚ್‌ಆರ್ ಭಾವನಾ ಕೃಪಾಮಿತ್ತಲ್, ಕೋ ಆರ್‌ಕೆಎಮ್‌ಎಫ್ ಅಧಿಕಾರಿ ರವಿ ಬಹುಜಾ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ವಿ.ಎಸ್. ಯರಾಶಿ ಮಾತನಾಡಿ, ಗ್ರಾಮೀಣ ಮಹಿಳೆಯರು ಕಂಪ್ಯೂಟರ್, ಹೊಲಿಗೆ ತರಬೇತಿ ಪಡೆಯಲು ನಗರಗಳಿಗೆ ತೆರಳಬೇಕಾಗಿತ್ತು. ಆದರೆ ಹೀರೋ ಕಂಪನಿ ಇಲ್ಲಿಯೇ ತರಬೇತಿಯನ್ನು ಪ್ರಾರಂಭಿಸಿ ಅನಕೂಲತೆಯನ್ನು ಕಲ್ಪಿಸಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು.

ಶಿಬಿರಾರ್ಥಿ ಸೈನಾಜ ಸರಕಾವಾಸ ಅಭಿಪ್ರಾಯ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಅರ್ಜನಾ ಕೌಲ್‌ಸುಂಬಾಲಿ, ಸದಸ್ಯ ಜಾಕೀರ ಮೂಲಿಮನಿ, ಪಿಡಿಒ ಲತಾ ಮಾನೆ, ಪೀರೋಜ, ನಾಶೀರ, ಅಲಮಾಸ ಮುಲ್ಲಾ, ಜಂದುಬಿ ಹಿರೇಮನಿ, ರಾಜೇಸಾಬ ಹಿರೇಮನಿ, ಗೌರಮ್ಮ ಮುಸುಂಡಿ, ಲಕ್ಷ್ಮೀ ಪ್ಯಾಟಿ ಮುಂತಾದವರು ಇದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img