ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ ಕೇಸ್‌: ಹಂತಕನ ಫೋಟೋ ಬಹಿರಂಗ

0
Spread the love

ಬಾಲಿವುಡ್ ಖ್ಯಾತ ನಟ ಸೈಫ್‌ ಅಲಿ ಖಾನ್ ಅವರ ಮನೆಗೆ ಗುರುವಾರ ನಸುಕಿನ ಜಾವ ನುಗ್ಗಿದ ದುಷ್ಕರ್ಮಿಗಳು ನಟನ ಮೇಲೆ 6 ಬಾರಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಭೀಕರವಾಗಿ ಗಾಗಯೊಂಡಿದ್ದ ಸೈಫ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಶಂಕಿತ ಆರೋಪಿಯ ಫೋಟೋ ಮತ್ತು ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು ಅದನ್ನು ಪೊಲೀಸರು ಬಹಿರಂಪಡಿಸಿದ್ದಾರೆ.

Advertisement

ಗುರುವಾರ (ಜ.16) ಬೆಳಗ್ಗಿನ ಜಾವ 2:33ಕ್ಕೆ ಸೈಫ್‌ ಅಲಿ ಖಾನ್‌ ಅವರ ಅಪಾರ್ಟ್‌ಮೆಂಟ್‌ನ ಮೆಟ್ಟಿಲುಗಳಲ್ಲಿ ಶಂಕಿತ ಆರೋಪಿ ಇಳಿದು ಹೋಗುತ್ತಿರುವುದು ಸಿಟಿಟಿವಿಯಲ್ಲಿ ಸೆರೆಯಾಗಿದೆ. ಈ ಬೆನ್ನಲ್ಲೇ ಮುಂಬೈ ಪೋಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು ಆರೋಪಿ ಯಾರು? ಈತನ ಟಾರ್ಗೆಟ್ ಏನಾಗಿತ್ತು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಂಕಿತ ಆರೋಪಿಯ ಫೋಟೋ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ. ಈ ವೇಳೆ ಶಂಕಿತ ವ್ಯಕ್ತಿಯೂ ಟೀ-ಶರ್ಟ್‌, ಜೀನ್ಸ್‌ ಪ್ಯಾಂಟ್‌ ಧರಿಸಿದ್ದು ಬ್ಯಾಗ್‌ವೊಂದನ್ನ ಹಾಕಿಕೊಂಡಿದ್ದಾನೆ. ಕಿತ್ತಳೆ ಬಣ್ಣದ ಸ್ಕಾಫ್‌ ಧರಿಸಿದ್ದಾನೆ. ಮೆಟ್ಟಿಲುಗಳಿಂದ ಇಳಿದು ಹೋಗುತ್ತಿರುವಾಗ ಸಿಟಿಟಿವಿ ಕ್ಯಾಮೆರಾ ನೋಡಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.


Spread the love

LEAVE A REPLY

Please enter your comment!
Please enter your name here