ಬೀದರ್ʼನಲ್ಲಿ ನಡೆದ ದರೋಡೆ ಕೇಸ್: ಇಬ್ಬರು ಆರೋಪಿಗಳ ಗುರುತನ್ನು ಪತ್ತೆ ಹಚ್ಚಲಾಗಿದೆ‌ – ಸಚಿವ ಡಾ. ಜಿ ಪರಮೇಶ್ವರ್

0
Spread the love

ಬೆಂಗಳೂರು: ಬೀದರ್‌ ನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿಂತೆ ದರೋಡೆಕೋರ ಇಬ್ಬರು ಆರೋಪಿಗಳ ಗುರುತನ್ನು ಪತ್ತೆ ಹಚ್ಚಲಾಗಿದೆ ಎಂದು  ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ನಗರಲದಲಿ ಮಾತನಾಡಿದ ಅವರು,

Advertisement

ದರೋಡೆಕೋರ ಇಬ್ಬರು ಆರೋಪಿಗಳ ಗುರುತನ್ನು ಪತ್ತೆ ಹಚ್ಚಲಾಗಿದೆ. ಅವರನ್ನು ಪೊಲೀಸರು ಟ್ರ್ಯಾಕ್ ಮಾಡಿ ಹಿಂಬಾಲಿಸುತ್ತಿದ್ದಾರೆ. ಒಂದು ಅಥವಾ ಎರಡು ದಿನದಲ್ಲಿ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡ್ತಾರೆ ಎಂದು ತಿಳಿಸಿದರು. ಆರೋಪಿಗಳು ಹಲವು ದಿನಗಳಿಂದ ಎಟಿಎಂಗೆ ಹಣ ತುಂಬುವ ಎಸ್‌ಬಿಐ ಸಿಬ್ಬಂದಿಯನ್ನು ಫಾಲೋ ಮಾಡಿರಬಹುದು. ಈ ಬ್ಯಾಂಕ್‌ ಹೈದ್ರಾಬಾದ್ ಕಂಪನಿಗೆ ಗುತ್ತಿಗೆ ಕೊಟ್ಟಿದ್ದಾರೆ.

ಸೆಕ್ಯೂರಿಟಿ ಗಾರ್ಡ್‌ಗಳು ಇಲ್ಲದನ್ನು ನೋಡಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ವಿವರಿಸಿದರು. ಈಗಾಗಲೇ ಆರೋಪಿಗಳ ಜಾಡು ಹಿಡಿದು ರಾಜ್ಯದ ಪೊಲೀಸರು ಹೈದರಾಬಾದ್‌ಗೆ ತೆರಳಿದ್ದಾರೆ. ಆದಷ್ಟು ಶೀಘ್ರವಾಗಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here