ಪುಣ್ಯಾರಾಧನೆಯಲ್ಲಿ ಶೃದ್ಧಾಭಕ್ತಿಯಿಂದ ಪಾಲ್ಗೊಳ್ಳೋಣ: ಶ್ರೀ ಡಾ. ವಿಶ್ವನಾಥ ಮಹಾಸ್ವಾಮಿಗಳು

0
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇಲ್ಲಿನ ಕೋಡಿಕೊಪ್ಪದ ಶ್ರೀ ವೀರಪ್ಪಜ್ಜನವರ ಪುಣ್ಯಾರಾಧನೆಯ ಶತಮಾನೋತ್ಸವವು ಜನವರಿ 30ರಿಂದ ಪ್ರಾರಂಭವಾಗಲಿದ್ದು, 7ರಂದು ಮಹಾರಥೋತ್ಸವ ಜರುಗಲಿದೆ. ಈ ನಿಮಿತ್ತ ಶ್ರೀಮಠದಲ್ಲಿ ಪುಣ್ಯಾರಾಧನೆ ಶತಮಾನೋತ್ಸವದ ಭಿತ್ತಿಪತ್ರ ಮತ್ತು ಲೋಗೋ ಬಿಡುಗಡೆ ಮಾಡಲಾಯಿತು.

Advertisement

ಭಿತ್ತಿಪತ್ರ ಮತ್ತು ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಪ.ಪೂ. ಶ್ರೀ ಡಾ. ವಿಶ್ವನಾಥ ಮಹಾಸ್ವಾಮಿಗಳು, ವೀರಪ್ಪಜ್ಜನರು ಹಠಯೋಗಿಗಳು ಲಿಂಗೈಕ್ಯರಾಗಿ 2025ಕ್ಕೆ 100 ವರ್ಷಗಳಾದವು. ಆದ್ದರಿಂದ ಟ್ರಸ್ಟ್ ಕಮಿಟಿಯವರು ಈ ಸಾರೆಯ ಜಾತ್ರಾ ಮಹೋತ್ಸವವನ್ನು ಪುಣ್ಯಾರಾಧನೆಯ ಶತಮಾನೋತ್ಸವವೆಂದು ಆಚರಿಸುತ್ತಿದ್ದಾರೆ. ಇದರಲ್ಲಿ ನಾವೆಲ್ಲರೂ ಶೃದ್ಧಾಭಕ್ತಿಗಳಿಂದ ಪಾಲ್ಗೊಳ್ಳೋಣ ಎಂದು ಹೇಳಿದರು.

ಯಾವುದೇ ಕಾರ್ಯಕ್ರಮ, ಜಾತ್ರೆ, ಸಮಾರಂಭ ಯಶಸ್ವಿಯಾಗಬೇಕಿದ್ದರೆ ಅದಕ್ಕೆ ಮಾಧ್ಯಮದವರ ಸಹಾಯ ಬೇಕೇಬೇಕು. ಅದಕ್ಕಾಗಿ ಈ ನಾಡಿನ ಎಲ್ಲ ಮಾಧ್ಯಮದವರು ಈ ಪುಣ್ಯಾರಾಧನೆಯ ಶತಮಾನೋತ್ಸವದ ಸುದ್ದಿಯನ್ನು ನಾಡಿನಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಿತ್ತರಿಸಬೇಕೆಂದು ಶ್ರೀಗಳು ಹೇಳಿದರು.

ಫೆಬ್ರುವರಿ 5ರಂದು ಪುಣ್ಯಾರಾಧನೆಯ ಶತಮಾನೋತ್ಸವದ ವಿದ್ಯುಕ್ತ ಉದ್ಘಾಟನೆ ಜರುಗಲಿದ್ದು, ನಾಡಿನ ಹರ-ಗುರು-ಚರ ಮೂರ್ತಿಗಳು, ರಾಜಕೀಯ ಧುರೀಣರು, ಗಣ್ಯರು, ವಿದ್ವಾಂಸರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಪಾಲ್ಗೊಂಡು ಪುನೀತರಾಗೋಣ. ಆ. 30ರ ಮಧ್ಯಾಹ್ನ 12ಕ್ಕೆ ಪಟ್ಟಣದ ಕೇಂದ್ರ ಭಾಗದಲ್ಲಿರುವ ಶ್ರೀ ಗಜಾನನ ದೇವಸ್ಥಾನದಿಂದ ವೀರಪ್ಪಜ್ಜನವರ ಭವ್ಯ ಭಾವಚಿತ್ರದ ಮೆರವಣಿಗೆಯು ಪಟ್ಟಣದ ಪ್ರಮುಖ ಮಾರ್ಗಗದಲ್ಲಿ ನಡೆಯಲಿದೆ. ಇದರಲ್ಲಿ ಭಕ್ತರೆಲ್ಲರೂ ಪಾಲ್ಗೊಳ್ಳಬೇಕೆಂದು ಡಾ. ಗೌರಿ ವಿನಂತಿಸಿದರು.

ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ ಕಮಿಟಿಯ ಅಧ್ಯಕ್ಷ ಡಾ. ಎಂ.ಸಿ. ಚಪ್ಪನ್ನಮಠ ವಹಿಸಿದ್ದರು. ಸಭೆಯನ್ನುದ್ದೇಶಿಸಿ ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ, ಮೈಲಾರಪ್ಪ ಚಳ್ಳಮರದ ಮಾತನಾಡಿದರು. ಸಭೆಯಲ್ಲಿ ಕುಮಾರಸ್ವಾಮಿ ಕೋರಧಾನ್ಯಮಠ, ವಿಜಯಕುಮಾರ ಅಂಗಡಿ, ಶೇಕಪ್ಪ ಜುಟ್ಲ, ಮಲ್ಲಿಕಾರ್ಜುನಗೌಡ ಮಲ್ಲನಗೌಡ್ರ, ಕೃಷ್ಣಪ್ಪ ಜುಟ್ಲ, ಅಂದಪ್ಪ ಧರ್ಮಾಯತ, ಮಾಂತಯ್ಯ ಗುರುವಡೆಯರ, ಶಂಕ್ರಯ್ಯ ಮಠದ, ಅಂದಾನಗೌಡ ಬೂದಿಹಾಳ, ಶಿವಾನಂದ ಸಂಗನಾಳ, ಬಸವರಾಜ ಧರ್ಮಾಯತ, ಡಾ. ಮಲ್ಲನಗೌಡ್ರ ಮುಂತಾದವರಿದ್ದರು.

ಟ್ರಸ್ಟ್ ಕಮಿಟಿಯ ಸದಸ್ಯ ಡಾ. ಎಲ್.ಎಸ್. ಗೌರಿ ಮಾತನಾಡಿ, ಶ್ರೀ ವೀರಪ್ಪಜ್ಜನವರ ಪುಣ್ಯಾರಾಧನೆಯ ಶತಮಾನೋತ್ಸವದ ಕಾರ್ಯಕ್ರಮಗಳ ವಿವರಣೆ ನೀಡಿದರು. ಜ. 30ರಿಂದ ವೀರಪ್ಪಜ್ಜನರ ಜೀವನ ದರ್ಶನದ ಪ್ರವಚನ ಪ್ರಾರಂಭವಾಗಲಿದ್ದು, ಪ್ರವಚನ ನುಡಿಯನ್ನು ರೋಣ ಬೂದೀಶ್ವರ ಮಠದ ಪ.ಪೂ. ಡಾ. ವಿಶ್ವನಾಥ ಮಹಾಸ್ವಾಮಿಗಳವರು ನುಡಿಯಲಿದ್ದಾರೆ. ಪ್ರತಿ ದಿನ ಒಬ್ಬರು ಅಥವಾ ಇಬ್ಬರು ಮಹಾಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.


Spread the love

LEAVE A REPLY

Please enter your comment!
Please enter your name here