ವಿಜಯಸಾಕ್ಷಿ ಸುದ್ದಿ, ಡಂಬಳ: ಮುಂಡರಗಿ ನಗರದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಸರಸ್ವತಿ ಮ.ಆನದಂರಬಾವಿ ಜಾನಪದ ಗೀತೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಭಾವಗೀತೆ ಸ್ಪರ್ಧೆಯಲ್ಲಿ ಭಾವನಾ ಯಲಿಗಾರ ತೃತೀತ ಸ್ಥಾನ ಪಡೆದಿದ್ದಾಳೆ. ಕವ್ವಾಲಿಯಲ್ಲಿ ಸಮರೀನ್ ಅತ್ತಾರ, ಭಾಗ್ಯ ರಾಘಣ್ಣವರ, ರುದ್ರಮ್ಮ ಗುರುವಿನ, ಜಲಜಾಕ್ಷಿ ಕಿಲಾರಿ, ದೇವಮ್ಮ ರಾಘಣ್ಣವರ, ಸುನೇರನಾಜ್ ದೊಡ್ಡಮನಿ, ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿಜೇತ ಮಕ್ಕಳಿಗೆ ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಹಾಗೂ ಮುಖ್ಯೊಪಾಧ್ಯಾಯ ಎಸ್.ಎನ್. ಕಲ್ಲಿಗನೂರ, ಮಾರ್ಗದರ್ಶ ಮಾಡಿದ ಸಂಗೀತ ಶಿಕ್ಷಕರಾದ ಮೃತ್ಯುಂಜಯ ಎಚ್.ಹಿರೇಮಠ, ಎ.ವಿ. ಹಿರೇಮಠ, ಎ.ಬಿ. ಬೇವಿನಕಟ್ಟಿ, ವಿ.ಎಸ್. ಹಿರೇಮಠ, ಎಸ್.ಎಮ್. ಹಂಚಿನಾಳ, ಡಿ.ಎಮ್. ರಾಠೋಡ, ಬಿ.ಎಸ್. ಕಣವಿ, ಬಿ.ಎನ್. ಅಂಗಡಿ ಸಾಧಕ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.