ಗದಗ:- ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ರಾತ್ರಿ ಕುಡುಕರ ಹಾವಳಿ ಜೋರಾಗಿದ್ದು, ಕುಡಿದ ಮತ್ತಲ್ಲಿ ಚಾಕು ಇರಿತ, ಗಲಾಟೆಗಳು ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ.
ಇದರಿಂದ ಮನಗಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಅವರು, ಡ್ರಿಂಕ್ & ಡ್ರೈವ್ ಬಗ್ಗೆ ವಿಶೇಷ ಕಾರ್ಯಾಚರಣೆ ಕೈಗೊಂಡು ರಾತ್ರಿ ಕುಡುಕರಿಗೆ ಚಳಿ ಬಿಡಿಸಿದ್ದಾರೆ.
ಗದಗ ಬೆಟಗೇರಿ ಅವಳಿ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ನೇತೃತ್ವದಲ್ಲಿ ನಗರದ ಹೊಸ ಬಸ್ ನಿಲ್ದಾಣ, ಓಲ್ಡ್ ಡಿಸಿ ಆಫೀಸ್ ಸರ್ಕಲ್, ಮಹಾತ್ಮ ಗಾಂಧಿ ಸರ್ಕಲ್, ಹುಯಿಲಗೋಳ ನಾರಾಯಣರಾವ್ ಸರ್ಕಲ್, ಮುಳಗುಂದ ನಾಕಾ, ಬೆಟಗೇರಿ ಬಸ್ ನಿಲ್ದಾಣ ಭಾಗ ಸೇರಿದಂತೆ ಅನೇಕ ಕಡೆಗಳಲ್ಲಿ ಎಸ್‌ಪಿ ಕಾರ್ಯಾಚರಣೆ ನಡೆಸಿದರು.
ರಾತ್ರೋರಾತ್ರಿ ದಿಢೀರ್ ಎಸ್‌ಪಿ ಹಾಗೂ ಅನೇಕ ಪೊಲೀಸ್ ಅಧಿಕಾರಿಗಳು ಡ್ರೈವಿಂಗ್ ಮಾಡುವವರನ್ನು ತಡೆದು ತಪಾಸಣೆ ಮಾಡಿದರು. ಪಾನ ಮತ್ತರಾದವರಿಗೆ ದಂಡ ವಿಧಿಸುವುದರ ಮೂಲಕ ನಶೆ ಇಳಿಸುವ ಕೆಲಸ ಮಾಡಿದರು.
ಈ ಸಂದರ್ಭದಲ್ಲಿ ಪ್ರಬಾರಿ ಎಸ್.ಪಿ, ಡಿವೈಎಸ್ಪಿ, ಸಿಪಿಐ ಸೇರಿದಂತೆ ಅನೇಕ ಸಿಬ್ಬಂದಿ ಹಾಜರಿದ್ದರು.