ಬಿಗ್ ಬಾಸ್ ಕನ್ನಡ ಸೀಸನ್ 11, 112ನೇ ದಿನಕ್ಕೆ ಕಾಲಿಟ್ಟಿದ್ದು ಈ ವೇಳೆ ದೊಡ್ಮನೆಯಿಂದ ಒಬ್ಬೊಬ್ಬರೆ ಎಲಿಮಿನೇಟ್ ಆಗ್ತಿದ್ದಾರೆ. ಈ ವಾರದ ಮಧ್ಯದಲ್ಲಿ ಗೌತಮಿ ಮನೆಯಿಂದ ಹೊರ ಹೋಗಿದ್ದು ವಾರಂತ್ಯದಲ್ಲಿ ಧನರಾಜ್ ಆಚಾರ್ಯ ದೊಡ್ಮನೆಯಿಂದ ಆಚೆ ಬಂದಿದ್ದಾರೆ.
ಕನ್ನಡದ ಬಿಗ್ಬಾಸ್ ಸೀಸನ್ 11ಕ್ಕೆ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಧನರಾಜ್ ಆಚಾರ್ಯ ಎಂಟ್ರಿ ಕೊಟ್ಟು ಫಿನಾಲೆ ಹಂತದ ವರೆಗೂ ಬಂದಿದ್ದರು. ಆರಂಭದಲ್ಲಿ ಧನರಾಜ್ ಇಷ್ಟು ದಿನಗಳ ಕಾಲ ದೊಡ್ಮನೆಯಲ್ಲಿ ಉಳಿಯುತ್ತಾರೆ ಎಂದು ಕೊಂಡಿರಲಿಲ್ಲ. ಆದ್ರೆ ಉಳಿದ ಸ್ಪರ್ಧಿಗಳಿಗೆ ಟಫ್ ಕಾಂಪಿಟೇಷನ್ ಕೊಡುವ ಮೂಲಕ ಧನರಾಜ್ ಕೊನೆಯವರೆಗೂ ಉಳಿದುಕೊಂಡರು. 16 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದು ಧನರಾಜ್ ಭಾವುಕರಾಗಿ ದೊಡ್ಮನೆಯಿಂದ ಹೊರ ಹೋದರು.
ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ಗೌತಮಿ, ಉಗ್ರಂ ಮಂಜು, ರಜತ್, ಧನರಾಜ್, ಭವ್ಯಾ ನಾಮಿನೇಟ್ ಆಗಿದ್ದರು. ಇವರಲ್ಲಿ ಶನಿವಾರದ ಸಂಚಿಕೆಯಲ್ಲಿ ಗೌತಮಿ ಆಚೆ ಬಂದಿದ್ದರು. ಇದೀಗ ಭಾನುವಾರದ ಎಪಿಸೋಡ್ನಲ್ಲಿ ಉಗ್ರಂ ಮಂಜು ಹಾಗೂ ಧನರಾಜ್ ಆಚಾರ್ಯ ಟಾಪ್ 2 ಅಲ್ಲಿ ನಿಂತುಕೊಂಡಿದ್ದರು. ಆಗ ಕಿಚ್ಚ ಸುದೀಪ್ ಫಿನಾಲೆ ವಾರಕ್ಕೆ ಎಂಟ್ರಿ ಕೊಡುತ್ತಿರೋ ಮಂಜು ಅವರ ಹೆಸರನ್ನು ಹೇಳಿದ್ದಾರೆ. ಹೀಗಾಗಿ ಈ ವಾರ ಬಿಗ್ಬಾಸ್ ಮನೆಯಿಂದ ಧನರಾಜ್ ಆಚೆ ಬಂದಿದ್ದಾರೆ.
ಸದ್ಯ ಈಗ ಬಿಗ್ಬಾಸ್ ಮನೆಯಲ್ಲಿ ಕೇವಲ ಆರು ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ, ರಜತ್, ಮೋಕ್ಷಿತಾ, ಭವ್ಯಾ ಗೌಡ ಇದ್ದಾರೆ. ಮುಂದಿನ ವಾರ ಗ್ರ್ಯಾಂಡ್ ಫಿನಾಲೆ ಇರುವುದರಿಂದ ಈ ಬಾರಿಯ ಬಿಗ್ಬಾಸ್ ಸೀಸನ್ 11 ವಿನ್ನರ್ ಯಾರು ಎಂಬ ಕುತೂಹಲ ಮನೆ ಮಾಡಿದೆ.