ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕ್ಲರ್ಕ ಇನ್ ಹೋಟೆಲ್‌ನಲ್ಲಿ ಗದಗ ಜಿಲ್ಲಾ ಅಂಬಿಗರ ಗಂಗಾಮತ ಸಮಾಜದ ವಧು-ವರರ ಸಮಾವೇಶ ಏರ್ಪಡಿಸಲಾಗಿತ್ತು.
ಸಮಾವೇಶದ ಸಂಚಾಲಕರಾದ ದೇವೇಂದ್ರ ಅಂಬಿಗೇರ ಸರ್ವರನ್ನ ಸ್ವಾಗತಿಸಿ ವಧು-ವರರ ಮಾಹಿತಿಯನ್ನು ಪಿಪಿಟಿ ಮೂಲಕ ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಸಮಾಜದ ಮುಖಂಡ ಬಿ.ಎನ್. ಯರನಾಳ ವಹಿಸಿ ಮಾತನಾಡಿ, ದೇವೇಂದ್ರ ಅಂಬಿಗೇರರು ಇಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಮಾಡುತ್ತ ಬಂದಿರುವುದು ಸಂತೋಷದ ವಿಚಾರ. ಇಂತಹ ಕೆಲಸಗಳಲ್ಲಿ ಎಲ್ಲರೂ ಸಾಮಾಜಿಕ ಜವಾಬ್ದಾರಿ ತೆಗೆದುಕೊಂಡಾಗ ಮಾತ್ರ ಸಾಮಾಜಿಕ ಬೆಳವಣಿಗೆ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಅಂಬಿಗ ಸಮಾಜದ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹಾದಿಮನಿ, ಐ.ಟಿ. ಸುಣಗಾರ, ಜಗದೀಶ ಅಂಬಿಗೇರ, ಚಂದ್ರಶೇಖರ ಅಂಬಿಗೇರ, ಗುರು ತಿರ್ಲಾಪೂರ, ರಮೇಶ ಸಂಕಣ್ಣವರ, ದೇವರಾಜ ಬಾರಕೇರ, ಶಂಕರ ಅಂಬಿಗೇರ, ಶಶಾಂಕ ಅಂಬಿಗೇರ, ಸುಜಾತ ಸುಣಗಾರ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.