ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿಯ ತಹಸೀಲ್ದಾರ ಕಚೇರಿಯಲ್ಲಿ ತಾಲೂಕಾ ಆಡಳಿತ ಹಾಗೂ ಸಮಾಜದ ವತಿಯಿಂದ ಮಂಗಳವಾರ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿಯನ್ನು ಆಚರಿಸಲಾಯಿತು.

Advertisement

ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ತಹಸೀಲ್ದಾರ ಅನಿಲ ಬಡಿಗೇರ, ನಿಜಶರಣ ಅಂಬಿಗರ ಚೌಡಯ್ಯನವರು 11ರಿಂದ 12ನೇ ಶತಮಾನದಲ್ಲಿ ಅತ್ಯಂತ ನೇರ, ನಿಷ್ಠುರ, ವೈಚಾರಿಕ ವಚನಗಳ ಮೂಲಕ ಮೂಢನಂಬಿಕೆ, ಕಂದಾಚಾರ ಮುಂತಾದವುಗಳನ್ನು ತೀವ್ರವಾಗಿ ವಿರೋಧಿಸಿ ಪ್ರಸಿದ್ಧಿ ಪಡೆದಿದ್ದರು ಎಂದರು.

ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜದ ತಾಲೂಕಾಧ್ಯಕ್ಷ ಅಶೋಕ ಹುಬ್ಬಳ್ಳಿ ಮಾತನಾಡಿ, ನದಿ-ಹಳ್ಳ-ಕೊಳ್ಳ, ಹೊಳೆಗಳಲ್ಲಿ ದೋಣಿ ಸಾಗಿಸುವ ಅಂಬಿಗ ವೃತ್ತಿಯ ಚೌಡಯ್ಯನವರು 12ನೇ ಶತಮಾನದ ಪ್ರಸಿದ್ಧ ವಚನಕಾರರಾಗಿದ್ದರು. ಸಾಮಾಜಿಕ ಬದಲಾವಣೆಯ ಬಗೆಗೆ ತೀವ್ರ ಕಳಕಳಿಯುಳ್ಳ ಧ್ಯೇಯವಾದಿ, ಅಸತ್ಯ, ಅನ್ಯಾಯ, ಮೂಢನಂಬಿಕೆಗಳನ್ನು ಖಂಡಿಸುವ ನಿಷ್ಠುರವಾದಿಯಾಗಿದ್ದರು. ಕೆಳವರ್ಗದ ಶೋಷಣೆಗೆ ಒಳಗಾದವನ್ನು ಮೇಲುಸ್ತರಕ್ಕೆ ತಂದು, ತಮ್ಮ ಹರಿತವಾದ ವಚನಗಳ ಮೂಲಕ ಸಮಾಜದಲ್ಲಿ ವೈಚಾರಿಕ ಕ್ರಾಂತಿಯನ್ನು ತಂದಿದ್ದಾರೆ. ಇಂತಹವರ ಆದರ್ಶ ಎಲ್ಲರಿಗೂ ಸದಾಕಾಲ ಸ್ಫೂರ್ತಿದಾಯಕ ಎಂದರು.

ಪ.ಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಪ್ರವೀಣ ಹುಬ್ಬಳ್ಳಿ, ಶಂಕರ ಕುಸ್ಲಾಪೂರ, ಮಹಾಂತೇಶ ದಶಮನಿ, ಮಹ್ಮದಶಫಿ ಹೆಸರೂರ, ಬಾಬಾಜಾನ ಕೋಳಿವಾಡ, ಬಸವರಾಜ ಕಂಬಳಿ, ಶಿರಸ್ತೇದಾರ ಹುಸೇನಸಾಬ ಬಾವಿಕಟ್ಟಿ, ಎಎಸ್‌ಐ ಬಾರಿಗಿಡದ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here