ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಈಗಾಗಲೇ ಕಾಲು ನೋವಿಗೆ ಚಿಕಿತ್ಸೆ ಪಡೆದಿದ್ದರು ಸಹ ರಶ್ಮಿಕಾ ನಡೆದಾಡಲು ಪರದಾಡುತ್ತಿದ್ದಾರೆ. ಇಂದು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರಶ್ಮಿಕಾ ಕುಂಟುತ್ತಾ ವ್ಹೀಲ್ ಚೇರ್‌ನಲ್ಲಿ ಕುಳಿತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜಿಮ್ ಮಾಡುವ ವೇಳೆ ರಶ್ಮಿಕಾ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ ರಶ್ಮಿಕಾ. ವ್ಯಾಯಾಮ ಮಾಡುವ ಸಮಯದಲ್ಲಿ ಆದ ಗಾಯದಿಂದ ರಶ್ಮಿಕಾರ ಕಾಲಿನ ಮೂಳೆಯಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಇದಕ್ಕೆ ಚಿಕಿತ್ಸೆಯನ್ನೂ ಸಹ ರಶ್ಮಿಕಾ ಪಡೆಯುತ್ತಿದ್ದಾರೆ. ವಾರದ ಹಿಂದೆ, ಪ್ಲಾಸ್ಟರ್ ಹಾಕಿದ ತಮ್ಮ ಕಾಲಿನ ಚಿತ್ರವನ್ನು ಸಹ ರಶ್ಮಿಕಾ ಹಂಚಿಕೊಂಡಿದ್ದರು.
ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಕುಂಟುತ್ತಾ ಕಾರಿನಿಂದ ಇಳಿದು ವ್ಹೀಲ್ ಚೇರ್‌ನಲ್ಲಿ ಕೂರಲು ಹರಸಾಹಸ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಾಲು ನೋವಿನ ನಡುವೆಯೂ ಒಪ್ಪಿಕೊಂಡಿರುವ ಸಿನಿಮಾ ಕೆಲಸ ಮಾಡಲು ರಶ್ಮಿಕಾ ಮಂದಣ್ಣ ಮುಂದಾಗಿದ್ದಾರೆ.
ಇಂದು ಬೆಳಿಗ್ಗೆ ಅವರು ಹೈದರಾಬಾದ್ ವಿಮಾನ ನಿಲ್ದಾಣದಿಂದ ಮುಂಬೈಗೆ ಹೋಗಿದ್ದು, ಅಲ್ಲಿ ಅವರ ನಟನೆಯ ಹಿಂದಿ ಸಿನಿಮಾ ‘ಛಾವಾ’ದ ಡಬ್ಬಿಂಗ್ ಮತ್ತು ಪ್ಯಾಚ್ ವರ್ಕ್ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ.
ಇತ್ತೀಚೆಗೆ ಜಿಮ್‌ನಲ್ಲಿ ಕಾಲಿಗೆ ಪೆಟ್ಟಾಗಿರುವ ಬಗ್ಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಜಿಮ್‌ನಲ್ಲಿ ನಾನು ಗಾಯಗೊಂಡಿದ್ದೇನೆ. ಮುಂದಿನ ಕೆಲ ವಾರ ಅಥವಾ ತಿಂಗಳ ಕಾಲ ನಾನು ವಿಶ್ರಾಂತಿಯಲ್ಲಿರುತ್ತೇನೆ. ಚೇತರಿಕೆಯಾಗಲು ಎಷ್ಟು ಸಮಯ ಬೇಕಾಗಬಹುದು ಎನ್ನುವುದು ದೇವರಿಗೆ ಮಾತ್ರ ತಿಳಿದಿದೆ. ನನ್ನ ಕಾಲಿನ ನೋವು ಗುಣವಾದ ಬಳಿಕ ನಾನು ಥಾಮ, ಸಿಕಂದರ್ ಮತ್ತು ಕುಬೇರ ಸೆಟ್‌ಗೆ ಮರಳುತ್ತೇನೆ. ಈ ವಿಳಂಬಕ್ಕೆ ಕ್ಷಮೆ ಕೋರುತ್ತೇನೆ ಎಂದಿದ್ದರು.
ರಶ್ಮಿಕಾ ಮಂದಣ್ಣ, ವಿಕ್ಕಿ ಕೌಶಲ್ ನಟನೆಯ ‘ಛಾವಾ’ ಸಿನಿಮಾ ಫೆಬ್ರವರಿ 14 ಕ್ಕೆ ತೆರೆಗೆ ಬರುತ್ತಿದೆ. ಸಿನಿಮಾದ ಡಬ್ಬಿಂಗ್ ಹಾಗೂ ಮುಖ್ಯವಾಗಿ ಪ್ರಚಾರ ಕಾರ್ಯದಲ್ಲಿ ರಶ್ಮಿಕಾ ಪಾಲ್ಗೊಳ್ಳಬೇಕಿದೆ. ಸದ್ಯ ಸಿನಿಮಾದ ರಶ್ಮಿಕಾ ಲುಕ್ ಬಿಡುಗಡೆ ಮಾಡಲಾಗಿದ್ದು ನಟಿಯ ಲುಕ್ ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ.