ಕಾಂಗ್ರೆಸ್​ ಬಗ್ಗೆ ಮಾತನಾಡಲು ಹೆಚ್​. ವಿಶ್ವನಾಥ್ ಯಾರು?: ಸಚಿವ ಸುಧಾಕರ್ ಹಿಂಗೇಳಿದ್ಯಾಕೆ!?

0
Spread the love

ಚಿಕ್ಕಬಳ್ಳಾಪುರ:- ಡಿಕೆಶಿ ಕರ್ನಾಟಕದ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್​. ವಿಶ್ವನಾಥ್ ಹೇಳಿಕೆಗೆ ಸಚಿವ ಸುಧಾಕರ್ ತಿರುಗೇಟು ಕೊಟ್ಟಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ಅವರು, ಹೆಚ್​. ವಿಶ್ವನಾಥ್​​ ಕಾಂಗ್ರೆಸ್ ಪಕ್ಷದ​​ ಸದಸ್ಯರಲ್ಲ. ಹೆಚ್​. ವಿಶ್ವನಾಥ್​ ಅವರೇ ನೀವು ಮೊದಲು ಬಿಜೆಪಿಯ ಮನೆ ಸರಿಪಡಿಸಿಕೊಳ್ಳಿ. ನಿಮ್ಮ ಅನುಭವವನ್ನು ಬಿಜೆಪಿಯ ಉದ್ಧಾರಕ್ಕೆ ಬಳಸಿಕೊಳ್ಳಿ ಎಂದರು.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ನಮ್ಮ ಪಕ್ಷದ ಹೈಕಮಾಂಡ್​ಗೆ ಬಿಟ್ಟ ನಿರ್ಧಾರ. ನಮ್ಮ ಪಕ್ಷದ ಹೈಕಮಾಂಡ್​​ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ಕಾಂಗ್ರೆಸ್​ ಪಕ್ಷದ ಬಗ್ಗೆ ಮಾತನಾಡೋಕೆ ಹೆಚ್​. ವಿಶ್ವನಾಥ್ ಯಾರು? ಅವರೇನೂ ಕಾಂಗ್ರೆಸ್ ಪಕ್ಷದ ಸದಸ್ಯರಲ್ಲ ಎಂದು ಸಚಿವ ಎಂ.ಸಿ. ಸುಧಾಕರ್ ಕಿಡಿಕಾರಿದ್ದಾರೆ.


Spread the love

LEAVE A REPLY

Please enter your comment!
Please enter your name here