ಬೆಳಗಾವಿ:- ಗೂಡ್ಸ್ ವಾಹನ ಪಲ್ಟಿಯಾಗಿ ಸುಮಾರು 25ಕ್ಕೂ ಹೆಚ್ಚು ನರೇಗಾ ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಹುಕ್ಕೇರಿ ತಾಲೂಕಿನ ಹೊಸುರ ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿಯಲ್ಲಿ ಜರುಗಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 25ಕ್ಕೂ ಹೆಚ್ಚು ಕೂಲಿ ಕಾರ್ಮಿಕರನ್ನು ತುಂಬಿಕೊಂಡು ನರೇಗಾ ಕೆಲಸಕ್ಕೆ ಹೋಗಲಾಗುತ್ತಿತ್ತು. ಯಮಕನಮರಡಿ ಗ್ರಾಮದಿಂದ ಹಿಡಕಲ್ ಡ್ಯಾಮ್‌ಗೆ ನರೇಗಾ ಕೆಲಸಕ್ಕೆ ಕೂಲಿ ಕಾರ್ಮಿಕರು ಹೊರಟಿದ್ದರು.
ಅಡ್ಡ ಬಂದ ಬುಲೆಟ್ ವಾಹನವನ್ನು ತಪ್ಪಿಸಲು ಹೋಗಿ ಗೂಡ್ಸ್ ಗಾಡಿಯ ಚಾಲಕ ನಿಯಂತ್ರಣ ತಪ್ಪಿದ್ದಾನೆ. ಗೂಡ್ಸ್ ವಾಹನ ಪಲ್ಟಿಯಾಗಿದ್ದು, ಕೆಲ ಕೂಲಿ ಕಾರ್ಮಿಕರ ಕೈ, ಕಾಲು ಮುರಿದಿದೆ.
25ಕ್ಕೂ ಹೆಚ್ಚು ನರೇಗಾ ಕೂಲಿ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಒಟ್ಟಾರೆ ಕರ್ನಾಟಕದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ನಿನ್ನೆ ಒಂದೇ ದಿನ ಪ್ರತ್ಯೇಕ ಅಪಘಾತ ಘಟನೆಯಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ.