ಮೂಲಭೂತ ಸೌಕರ್ಯ ಒದಗಿಸಲು ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿಯ 35 ವಾರ್ಡ್ಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಗದಗ ತಾಲೂಕ ಘಟಕದ (ಟಿ.ಎ. ನಾರಾಯಣಗೌಡ್ರ ಬಣ) ಅಧ್ಯಕ್ಷರಾದ ಮುತ್ತಣ್ಣ ಚವಡಣ್ಣವರ ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಕರವೇ ಗದಗ ಜಿಲ್ಲಾಧ್ಯಕ್ಷರಾದ ಹನಮಂತಪ್ಪ ಎಚ್.ಅಬ್ಬಿಗೇರಿ ಮಾತನಾಡಿ, ಇನ್ನೇನು ಬೇಸಿಗೆಯ ಕಾಲ ಬರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ನೀರಿನ ಹಾಹಾಕಾರ ಉಂಟಾಗುವುದು ಖಚಿತ ಎಂದು ಆಂತಕ ವ್ಯಕ್ತಪಡಿಸಿದರು.

ವಾರ್ಡ್ಗಳಲ್ಲಿ ಬೀದಿ ದೀಪ ಅಳವಡಿಕೆ, ಗಟಾರ ಸ್ವಚ್ಛತೆಗೆ ವ್ಯವಸ್ಥೆ ಮಾಡಬೇಕು. ವಾರ್ಡ್ ನಂ. 34ರ ಸಂಗೊಳ್ಳಿ ರಾಯಣ್ಣ ಉದ್ಯಾನವನವನ್ನು ಸಂಪೂರ್ಣ ಸ್ವಚ್ಛಗೊಳಿಸಬೇಕು ಮತ್ತು ಆ ಉದ್ಯಾನವನದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಿಂಗನಗೌಡ ಮಾಲಿಪಾಟೀಲ, ನಜೀರಸಾಬ ಹದ್ಲಿ, ಮುಸ್ತಾಕ ಡಾವಣಗೇರಿ, ಯಲ್ಲಪ್ಪ ಭೋವಿ, ತೌಸಿಫ ಢಾಲಾಯತ, ಶಂಭು ಹಿರೇಮಠ, ನಾಗಪ್ಪ ಅಣ್ಣಿಗೇರಿ, ಅಕ್ಕಮಹಾದೇವಿ ದೊಡ್ಡಗೌಡರ, ಚಂದ್ರಶೇಖರ ಶ್ಯಾಗೋಟಿ, ಸಿರಾಜ ಹೊಸಮನಿ, ಶಿವಾನಂದ ಮಡಿವಾಳರ, ಅಕ್ಬರಸಾಬ ದೊಡ್ಡಮನಿ, ಆನಂದ ಹಂಡಿ, ಯಮನೂರಸಾಬ ನದಾಫ್, ಅಶೋಕ ಅಣ್ಣಿಗೇರಿ, ಗೌಸುಸಾಬ ಶಿರಹಟ್ಟಿ, ಹೇಮಂತ ಹಕಾಕಿ, ರಮೇಶ ಅಬ್ಬಿಗೇರಿ, ಇರ್ಫಾನ ತಾಳಿಕೋಟಿ, ಸುಲೇಮಾನ ಮುಂಜಲಾಪೂರ, ಸಲೀಂ ಬೋದ್ಲೆಖಾನ, ಹುಸೇನ ಕುಂಡಾಲಿ, ಮುಸ್ತಾಕ ಡಾವಣಗೇರಿ, ದಾವಲಸಾಬ ತಹಸೀಲ್ದಾರ, ವಿನಾಯಕ ಬದಿ, ಶಬ್ಬೀರ ಚೌತಾಯ, ಅಕ್ಬರ ದೊಡ್ಡಮನಿ, ಕುಮಾರ ರ‍್ಯಾವಣ್ಣವರ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here