ಬೆಂಗಳೂರು: ಕೆಲವು ವಿಕೃತ ಮನಸ್ಥಿತಿಯ ವ್ಯಕ್ತಿಗಳ ಕಾರಣದಿಂದ ಹೆಂಗಳೆಯರು ಸ್ವತಂತ್ರವಾಗಿ ಓಡಾಡಲು ಕೂಡಾ ಕಷ್ಟವಾಗಿಬಿಟ್ಟಿದೆ. ಒಂಟಿ ಹೆಣ್ಣು ಸಿಕ್ಕರೆ ಸಾಕು ಕೆಲವು ವಿಕೃತ ಮನಸ್ಥಿತಿಯವರು ಅವರ ಮೈ ಮುಟ್ಟುವಂತಹದ್ದೂ,
ಹೆಣ್ಣು ಮಕ್ಕಳನ್ನು ಹಿಂಬಾಲಿಸುತ್ತಾ ಬಂದು ಅವರೊಂದಿಗೆ ಅನುಚಿತವಾಗಿ ವರ್ತಿಸುವಂತಹದ್ದು ಮಾಡುತ್ತಿರುತ್ತಾರೆ. ಇಂತಹ ನಾಚಿಕೆಗೇಡಿನ ಸಂಗತಿಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ. ಇದೀಗ ಅಂತಹದೇ ಹೇಯ ಕೃತ್ಯವೊಂದು ಬೆಳಕಿಗೆ ಬಂದಿದ್ದು,
ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾಸೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತ: ತಿಲಕ್ ನಗರದವನಾದ ಆರೋಪಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ. ಅನೇಕ ದಿನಗಳಿಂದ ಯುವತಿಯನ್ನು ಹಿಂಬಾಲಿಸಿಕೊಂಡು ಅನುಚಿತವಾಗಿ ವರ್ತಿಸಿ ಎಸ್ಕೇಪ್ ಆಗಿದ್ದ. ಇದೇ ತಿಂಗಳು 17 ರಂದು ಬೈಕ್ ನಲ್ಲಿ ಯುವತಿಯನ್ನು ಹಿಂಬಲಿಸಿಕೊಂಡು ಬಂದು ಮತ್ತೆ ಅನುಚಿತವಾಗಿ ವರ್ತಿಸಿ ಖಾಸಗಿ ಅಂಗ ತೋರಿಸಿ ಎಸ್ಕೇಪ್ ಆಗಿದ್ದ.
ಇದರಿಂದ ಸಾಕಷ್ಟು ಗಾಬರಿಯಾಗಿದ್ದ ಯುವತಿ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಕಾಮುಕ ಯಾಸೀನ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಯಾಸೀನ್ ಇದೇ ರೀತಿ ಅನೇಕ ಯುವತಿಯರ ಜೊತೆ ವರ್ತಿಸಿರುವ ಶಂಕೆ ಇದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.