ಅಪಘಾತ ರಹಿತ ಸೇವೆ ನಿಮ್ಮದಾಗಿರಲಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಚಾಲನಾ ಸಿಬ್ಬಂದಿಗಳ ದಿನಾಚರಣೆ ನಿಮಿತ್ತ ಶುಕ್ರವಾರ ವಾ.ಕ.ರ.ಸಾ ಸಂಸ್ಥೆಯ ಲಕ್ಮೇಶ್ವರ ಘಟಕದ ವ್ಯವಸ್ಥಾಪಕಿ ಸವಿತಾ ಆದಿ ಕರ್ತವ್ಯನಿರತ ಚಾಲನಾ ಸಿಬ್ಬಂದಿಗಳಿಗೆ ಹೂವು ನೀಡಿ, ಸಿಹಿ ಹಂಚುವುದರ ಮೂಲಕ ಶುಭ ಕೋರಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚಾಲಕ-ನಿರ್ವಾಹಕರು ತಮ್ಮ ನಿತ್ಯದ ಬದುಕಿನ ಕಷ್ಟಗಳನ್ನು ಬದಿಗೊತ್ತಿ, ನಿತ್ಯ ಬರುವ ಹತ್ತಾರು ಸಂಕಷ್ಟಗಳನ್ನು ಎದುರಿಸುತ್ತಾ, ಸಾರ್ವಜನಿಕರಿಗೆ ವಿಶ್ರಾಂತಿ ರಹಿತ ಸೇವೆಯನ್ನು ನೀಡುತ್ತಾರೆ. ಅಪಘಾತ ರಹಿತ ಸೇವೆ ನಿಮ್ಮದಾಗಿರಲಿ ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಎಂದರು.

ಈ ವೇಳೆ ಸಾರಿಗೆ ನಿಯಂತ್ರಕ ಎಂ.ಎಸ್. ಶಿರಬಡಗಿ, ಹನುಮಂತಪ್ಪ ಮ್ಯಾಟೆಣ್ಣವರ ಸೇರಿದಂತೆ ಸಿಬ್ಬಂದಿಗಳಿದ್ದರು.


Spread the love

LEAVE A REPLY

Please enter your comment!
Please enter your name here