ಇಸ್ರೋ ಕೇಂದ್ರಕ್ಕೆ ವಿದ್ಯಾರ್ಥಿಗಳ ಭೇಟಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಯು.ಆರ್. ರಾವ್ ಶಾಶ್ವತ ಉಪಗ್ರಹ ಕೇಂದ್ರ ಬೆಂಗಳೂರು-ಇಸ್ರೋಗೆ ಭೇಟಿ ನೀಡಿದರು.

Advertisement

ಯು.ಆರ್. ರಾವ್ ಉಪಗ್ರಹ ಕೇಂದ್ರ, ಮುಖ್ಯವಾಗಿ ಉಪಗ್ರಹ ಸಂಶೋಧನೆ ಮತ್ತು ಅಭಿವೃದ್ಧಿಯ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಈ ಕೇಂದ್ರವು ಹವಾಮಾನ ಸಂಶೋಧನೆ, ಭೂಮಿಯ ಮೇಲ್ಛಾಯಾಚಿತ್ರಣ ಮತ್ತು ವೈಜ್ಞಾನಿಕ ಅಧ್ಯಯನಗಳನ್ನು ನಡೆಸುತ್ತದೆ. ಹಾಗೆಯೇ, ದುರಂತ ನಿರ್ವಹಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಇಎಸ್‌ಆರ್‌ಒನ ಉಪಗ್ರಹಗಳು ವಿವಿಧ ನೈಸರ್ಗಿಕ ದುರಂತಗಳನ್ನು ಪತ್ತೆಹಚ್ಚಲು ಹಾಗೂ ಅವುಗಳ ಪರಿಹಾರಕ್ಕೆ ಸಾಕಷ್ಟು ಮಾಹಿತಿ ನೀಡುತ್ತವೆ.

ದೂರವಾಣಿ ಮತ್ತು ದೂರದೃಷ್ಟಿ ತಂತ್ರಜ್ಞಾನಗಳ ಉಪಯೋಗ, ದುರಂತ ನಿರ್ವಹಣೆ, ಉಪಕರಣಗಳ ನಿರ್ವಹಣೆ ಕುರಿತು ಅಲ್ಲಿಯ ಮುಖ್ಯ ಇಂಜನಿಯರ್‌ಗಳು ವಿದ್ಯಾರ್ಥಿಗಳೊಂದಿಗೆ ಮಾಹಿತಿಯನ್ನು ಹಂಚಿಕೊAಡರು. ಈ ಕ್ಷೇತ್ರದಲ್ಲಿನ ಸವಾಲು ಮತ್ತು ಪ್ರೇರಣೆಗಳು, ಇಸ್ರೋ ಕೇಂದ್ರದ ಅನುಭವಗಳು ಈ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿತು.

ವಿಭಾಗದ ಮುಖ್ಯಸ್ಥ ಡಾ. ರಮೇಶ್ ಎಂ.ಬಡಿಗೇರ್, ಅಸೋಸಿಯೇಷನ್ ಸಂಯೋಜಕರಾದ ಪ್ರೊ. ಸಾದಿಕಾ ಕೆ ಮತ್ತು ಪ್ರೊ. ಉಜ್ಮಾ ಎಂ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here