ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ರಾಬರಿ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಂತೆ ಗನ್ ಹಾಗೂ ಚಾಕು ತೋರಿಸಿ ಮನೆಗೆ ನುಗ್ಗಿ ಕಳ್ಳತನ ಮಾಡಲಾಗಿದೆ.
Advertisement
ಸಿಟಿ ಮಾರ್ಕೇಟ್ ಬಳಿಯ ಆರ್.ಟಿ. ಸ್ಟ್ರೀಟ್ ನಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ನಾಲ್ಕು ಮಂದಿ ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ. ನಾಗರಾಜ್ ಎಂಬುವವರ ಮನೆಗೆ ನುಗ್ಗಿ ಬೆದರಿಸಿ ಚಿನ್ನ ಹಣ ದೋಚಿ ಖದೀಮರು ಎಸ್ಕೇಪ್ ಆಗಿದ್ದಾರೆ.
ತಾಯಿ, ಮಗ ಇದ್ದಾಗ ಮನೆಗೆ ನುಗ್ಗಿ ಕೈ ಕಾಲು ಕಟ್ಟಿ ಹಾಕಿ ಕೃತ್ಯ ಎಸಗಲಾಗಿದೆ. 25 ಗ್ರಾಂ, ಚಿನ್ನಾಭರಣ ಹಾಗೂ 30 ಸಾವಿರ ನಗದು ದೋಚಿ ಎಸ್ಕೇಪ್ ಆಗಿದ್ದಾರೆ. ಮನೆಯಲ್ಲಿ ನಾಗರಾಜ್ ಇರಲಿಲ್ಲ ಹೊರ ಹೋಗಿದ್ರು. ಈ ವೇಳೆ ಮನೆಗೆ ನುಗ್ಗಿ ಕೃತ್ಯ ನಡೆಸಲಾಗಿದೆ. ಸಿ.ಟಿ.ಮಾರ್ಕೆಟ್ ಠಾಣೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.