ದಾವಣಗೆರೆ: ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ ಕ್ರೇನ್ ತೆಗೆ ಎಂದಿದ್ದಕ್ಕೆ ಪೌರ ಕಾರ್ಮಿಕನ ಮೇಲೆ ಕ್ರೇನ್ ಚಾಲಕ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
Advertisement
ದಾವಣಗೆರೆಯ ವಿನೋಭಾ ನಗರ 1 ನೇ ಕ್ರಾಸ್ ನಲ್ಲಿ ನಡೆದ ಘಟನೆಯಾಗಿದ್ದು, ಪೌರ ಕಾರ್ಮಿಕ ಕಾರ್ತಿಕ್ ಮೇಲೆ ಕ್ರೇನ್ ಚಾಲಕ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದ್ದಾನೆ.
ಕಸ ತುಂಬುತ್ತಿದ್ದೇವೆ ಟ್ರ್ಯಾಕ್ಟರ್ ಹೋಗಲು ಸಮಸ್ಯೆ ಇದೆ ಕ್ರೇನ್ ತೆಗಿ ಎಂದಿದ್ದಕ್ಕೆ ಕೊರಳ ಪಟ್ಟಿ ಹಿಡಿದು ಹಲ್ಲೆ ನಡೆಸಿದ್ದು, ಹಲ್ಲೆ ನಡೆಸಿದವರ ಮೇಲೆ ದೂರು ನೀಡಲು ಮುಂದಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.