ನಾಳೆ ಬೆಂಗಳೂರಿಗೆ ಶಿವರಾಜ್ ಕುಮಾರ್: ನೆಚ್ಚಿನ ನಟನಿಗೆ ಭರ್ಜರಿ ವೆಲ್ ಕಮ್

0
Spread the love

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕ್ಯಾನ್ಸರ್ ಫ್ರೀ ಆಗಿದ್ದಾರೆ. ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಸದ್ಯ ಚೇತರಿಸಿಕೊಂಡಿರುವ ನಟ ನಾಳೆ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ನೆಚ್ಚಿನ ನಟನನ್ನು ಭರಮಾಡಿಕೊಳ್ಳಲು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.

Advertisement

ಶಿವಣ್ಣ ಆಪರೇಷನ್ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಸದ್ಯ ಅಮೇರಿಕಾದಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದೊಂದು ತಿಂಗಳಿನಿಂದ ಅಮೆರಿಕಾದಲ್ಲಿರುವ ನಟ ನಾಳೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

ಶಿವರಾಜ್​ ಕುಮಾರ್ ಸಂಪೂರ್ಣ ಗುಣಮುಖರಾಗಿ ವಾಪಸ್ ಬರುತ್ತಿರುವುದು ಅವರ ಅಭಿಮಾನಿಳಲ್ಲಿ ಸಡಗರವನ್ನುಂಟು ಮಾಡಿದೆ. ಇನ್ನು ದುನಿಯಾ ವಿಜಯ್​ ಕೂಡ ಶಿವಣ್ಣ ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ವಾಪಸ್ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಅವರನ್ನು ಸ್ವಾಗತಿಸಿ ದುನಿಯಾ ವಿಜಯ್ ಶಿವರಾಜ್​ಕುಮಾರ್​ಗೆ ಪತ್ರವನ್ನು ಬರೆದಿದ್ದಾರೆ.

ಹಾಲಹಲ ಕುಡಿದ ಶಿವನಿಗೆ ಯಾವ ಭಯ, ಪಾರ್ವತಮ್ಮನ ಎದೆಹಾಲು ಕುಡಿದ ಶಿವಣ್ಣನಿಗೆ ಯಾವ ಭಯ? ಪ್ರಶ್ನೆ ಮಾಡಿದ್ದು ಕ್ಯಾನ್ಸರ್, ಶಿವಣ್ಣ ಕೊಟ್ಟದ್ದಾಯ್ತು ಆನ್ಸರ್, ವಿಶ್ವಾದ್ಯಂತ ಕೋಟ್ಯಾಂತರ ಕನ್ನಡಿಗರ ಪ್ರಾರ್ಥನೆ ಫಲಕಂಡು, ವೈದ್ಯರ ಚಿಕಿತ್ಸೆ ಯಶಕಂಡು, ನಮ್ಮ ಗಂಡುಗಲಿ ಶತಚಿತ್ರಗಳ ಅಧಿಪತಿ ದೊಡ್ಮನೆಯ ದೊರೆ ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಅವರು ಇದೇ 26 ರಂದು ನಮ್ಮ ನಾಡಿಗೆ ಮರಳುತ್ತಿದ್ದಾರೆ. ಅವರ ಕಟ್ಟಾಭಿಮಾನಿಯಾಗಿ ನಾನು ಸ್ವಾಗತ ಕೋರುತ್ತೇನೆ ಎಂದು ದುನಿಯಾ ವಿಜಯ್ ಪತ್ರ ಬರೆದಿದ್ದಾರೆ.

ಇನ್ನು ಶಿವಣ್ಣ ಅಮೆರಿಕಾದಿಂದ ವಾಪಸ್ ಬರುತ್ತಿರುವ ಸುದ್ದಿಯಿಂದ ಅವರ ಅಭಿಮಾನಿಗಳು ತೀವ್ರ ಸಂತಸಗೊಂಡಿದ್ದಾರೆ. ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡುವದಕ್ಕೆ ಕಾಯುತ್ತಿದ್ದಾರೆ. ಏರ್​​ಪೋರ್ಟ್​ ಹಾಗೂ ಶಿವಣ್ಣನ ಮನೆಯ ಎದುರು ಅಭಿಮಾನಿಗಳ ಸಾಗರ ಕಾಣುವ ಎಲ್ಲಾ ಸಾಧ್ಯತೆಗಳು ಕೂಡ ಇವೆ. ಶಿವಣ್ಣನ ಸ್ವಾಗತಕ್ಕೆ ದೊಡ್ಮನೆಯ ಅಭಿಮಾನಿಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಅದ್ದೂರಿಯಾಗಿ ವೆಲ್​ಕಮ್ ಮಾಡುವುದಕ್ಕೆ ರೆಡಿಯಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here