ವಿಜಯಸಾಕ್ಷಿ ಸುದ್ದಿ, ಗದಗ: ಚಿಕೇನಕೊಪ್ಪದ ಮೌನಯೋಗಿ ಶ್ರೀ ಚನ್ನವೀರ ಶರಣರ 30ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಜ. 28ರಿಂದ ಫೆ. 3ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಮುದಗಲ್-ತಿಮ್ಮಾಪೂರ ಕಲ್ಯಾಣ ಆಶ್ರಮದ ಶ್ರೀಮಹಾಂತೇಶ್ವರ ಶ್ರೀಮಠದ ಪೂಜ್ಯಶ್ರೀ ಮಹಾಂತ ಸ್ವಾಮಿಗಳಿಂದ `ಮಹಾತ್ಮರ ಜೀವನ ದರ್ಶನ’ ಪ್ರವಚನ ಜರಗಲಿದೆ.
ಜ. 28ರಂದು ಸಂಜೆ 7 ಗಂಟೆಗೆ ಮಹಾತ್ಮರ ಜೀವನ ದರ್ಶನ ಪ್ರವಚನದ ಉದ್ಘಾಟನೆಯನ್ನು ಅಡ್ನೂರ-ಗದಗ-ರಾಜೂರ- ಬ್ರಹನ್ಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ನೆರವೇರಿಸುವರು.
ಸುಕ್ಷೇತ್ರ ಬಳಗಾನೂರಿನ ಪೂಜ್ಯಶ್ರೀ ಶಿವಶಾಂತವೀರ ಶರಣರು ನೇತೃತ್ವ ವಹಿಸುವರು. ಹುಬ್ಬಳ್ಳಿಯ ಶಂಕ್ರಯ್ಯ ಗುರುಮಠ ಸಂಗೀತ ಸೇವೆ ನೀಡುವರು. ಗದುಗಿನ ಬಸವರಾಜ ಹೊನ್ನಿಗನೂರ ತಬಲಾ ಸಾಥ್ ನೀಡುವರು. ಮೈಸೂರಿನ ವಿದ್ವಾನ್ ರವಿಕುಮಾರ ಅವರು ವಾಯಲಿನ್ ನುಡಿಸುವರು. ಪ್ರತಿದಿನ ಪ್ರವಚನದ ನಂತರ ತುಲಾಭಾರ ಸೇವೆ ಹಾಗೂ ಮಹಾಪ್ರಸಾದ ನೆರವೇರುವದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.