ವಿಜಯಸಾಕ್ಷಿ ಸುದ್ದಿ, ಮುಳಗುಂದ: ಭಾರತ ಜಗತ್ತಿಗೆ ಯೋಗ ವಿದ್ಯೆಯನ್ನು ದಯಪಾಲಿಸಿತು. ವಿಶ್ವ ಯೋಗ ದಿನಾಚರಣೆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಯೋಗದ ಮಹತ್ವವನ್ನು ವಿಶ್ವಕ್ಕೆ ತಿಳಿಸಿದರು ಎಂದು ಯೋಗ ಶಿಕ್ಷಕ ಸಂದೀಪ ನಡಗೇರಿ ಹೇಳಿದರು.
ಅವರು ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರಲ್ಲಿ ಯೋಗ ಶಿಕ್ಷಣ ನೀಡಿ, ಅವ್ವ ಸೇವಾ ಪ್ರತಿಷ್ಠಾನದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಕ್ಕಳು ಪ್ರಾಥಮಿಕ ಹಂತದಲ್ಲೇ ನಿತ್ಯ ಯೋಗ, ಧ್ಯಾನವನ್ನು ಮಾಡಬೇಕು. ಇದರಿಂದ ಏಕಾಗ್ರತೆ, ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ ಎಂದರು.
ಅವ್ವ ಸೇವಾ ಪ್ರತಿಷ್ಠಾನದ ಸದಸ್ಯ ಮಂಜುನಾಥ ಮಟ್ಟಿ ಮಾತನಾಡಿ, ಸಂದೀಪ ನಡಗೇರಿ ಅತೀ ಚಿಕ್ಕ ವಯಸ್ಸಿನಲ್ಲೇ ಯೋಗಾಭ್ಯಾಸದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಯುನಿವರ್ಸಿಟಿ ಬ್ಲೂ ಆಗಿ ಯೋಗದಲ್ಲಿ ಸಾಧನೆಗೈದಿರುವುದು ಹೆಮ್ಮೆಯ ಸಂಗತಿ. ಇಂಹತ ಸಾಧಕರನ್ನು ಗುರುತಿಸಿ ಸಹಾಯ-ಸಹಕಾರ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು.
ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡರ, ಎಂ.ಎಂ. ಮೇಗಲಮನಿ, ಕೆ.ಎಂ. ಹೆರಕಲ್, ಮಂಜುನಾಥ ಕಲ್ಯಾಣಮಠ, ಎಸ್.ಎಚ್. ಉಪ್ಪಾರ, ಎಚ್.ಆರ್. ಭಜಂತ್ರಿ, ವಿ.ಎಂ. ಕಂಠಿ, ಟಿ.ವೀಣಾ, ಎಸ್.ವಿ. ಹಿರೇಮಠ, ಎಸ್.ಡಿ. ಪಂಡಿತ, ನಂದಾ ಮಟ್ಟಿ, ಜ್ಯೋತಿ ಜಾಧಾವ, ಪವಿತ್ರಾ ಮಟ್ಟಿ, ರೇಣುಕಾ ಪರ್ವತಗೌಡ್ರ, ಮಂಜುನಾಥ ಕುಂಬಾರ, ಮಂಜುನಾಥ ಲಕ್ಮೇಶ್ವರ ಇದ್ದರು.