ಪದ್ಮಭೂಷಣ ಪ್ರಶಸ್ತಿಯನ್ನು ಕನ್ನಡಿಗರಿಗೆ ಹಾಗೂ ಗುರುಗಳಿಗೆ ಅರ್ಪಿಸಿದ ಅನಂತ್ ನಾಗ್

0
Spread the love

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ , ಮಾಜಿ ರಾಜಕಾರಣಿ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ತಮಗೆ ಘೋಷಣೆಯಾಗಿರುವ ಪ್ರಶಸ್ತಿಯನ್ನು ಅನಂತ್ ನಾಗ್ ಕನ್ನಡಿಗರಿಗೆ ಹಾಗೂ ಗುರುಗಳಿಗೆ ಅರ್ಪಿಸಿದ್ದಾರೆ.

Advertisement

ಈ ಪ್ರಶಸ್ತಿ ಸಿಕ್ಕಿರೋದಕ್ಕೆ ನನಗೆ ಸಂತೋಷವಾಗಿದೆ. ವಿಶೇಷವಾಗಿ ಕನ್ನಡಿಗರು ಈ ಪ್ರಶಸ್ತಿ ನನಗೆ ಬರಬೇಕು ಅಂತ ಇಷ್ಟಪಟ್ಟಿದರು. ನಮ್ಮ ದೇಶದಲ್ಲಿ ಹಿಂದಿನಿಂದ ಪದ್ಮ ಪ್ರಶಸ್ತಿ ಕೊಡುವ ವ್ಯವಸ್ಥೆ ಬೇರೆ ಇತ್ತು. ಪಿಎಂ ಅವರು 3 ವರ್ಷಗಳ ಹಿಂದೆ ಪದ್ಮ ಪ್ರಶಸ್ತಿಯಲ್ಲಿ ಸಾರ್ವಜನಿಕರು ಭಾಗಿಯಾಗಬೇಕು ಅಂತ ಘೋಷಣೆ ಮಾಡಿದ್ದರು. ಬಳಿಕ ಕನ್ನಡಿಗರು ನನ್ನ ಹೆಸರನ್ನು ಸೂಚಿಸಿದ್ದರು. ಆ ವರ್ಷ ನನಗೆ ಪ್ರಶಸ್ತಿ ಬರಲಿಲ್ಲ. 3 ವರ್ಷಗಳಿಂದ ಹೀಗೆ ಆಗಿತ್ತು ಎಂದು ಅನಂತ್‌ನಾಗ್ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರು ನನಗೆ ಪದ್ಮ ಪ್ರಶಸ್ತಿ ಬರಲಿ ಅಂತಾ ಅಭಿಯಾನ ನಡೆಸಿದ್ದರು. ಅಭಿಮಾನಿಗಳಿಗೆ ಈಗ ಸಂತೋಷವಾಗಿರೋದು ನನಗೂ ಸಂತೋಷವಾಗಿದೆ. ಪ್ರಶಸ್ತಿಯನ್ನು ಕನ್ನಡ ಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ನಾಟಕರಂಗ ಹಾಗೂ ನನ್ನ ಗುರುಗಳಿಗೆ ಪ್ರಶಸ್ತಿ ಅರ್ಪಿಸುತ್ತೇನೆ ಎಂದು ಅನಂತ್‌ನಾಗ್ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here