ಆನೇಕಲ್:- ಕೆಲಸ ಮಾಡುತ್ತಿದ್ದ ವೇಳೆ ಬಾಲ ಕಾರ್ಮಿಕನ ಬಲಗೈ ನಜ್ಜುಗುಜ್ಜಾಗಿರುವ ಘಟನೆ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಸಾಯಿ ಪ್ಯಾಕೇಜಿಂಗ್ ಕಾರ್ಖಾನೆಯಲ್ಲಿ ಜರುಗಿದೆ.
ಗಂಭೀರವಾಗಿ ಗಾಯಗೊಂಡ ಬಾಲ ಕಾರ್ಮಿಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆ ಬೆಡ್ ಮೇಲೆ ಬಾಲ ಕಾರ್ಮಿಕನ ನರಳಾಟ ಕರಳು ಹಿಂಡುವಂತೆ ಮಾಡಿದೆ. 17 ವರ್ಷದ ಬಾಲಕಾರ್ಮಿಕನನ್ನು ಅಸ್ಸಾಂ ಮೂಲದವ ಎನ್ನಲಾಗಿದೆ. ಕಳೆದ 18ನೇ ತಾರೀಖು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪಂಚಿಂಗ್ ಮಷಿನ್ ನಲ್ಲಿ ಕೈ ಸಿಲುಕಿದ ಹಿನ್ನೆಲೆ ಬಲಗೈ ಸಂಪೂರ್ಣ ನಜ್ಜುಗುಜ್ಜಾಗಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಇನ್ನೂ ಘಟನೆ ಬಳಿಕ ಕಂಪನಿ ಮಾಲೀಕರಾದ ಹೇಮಂತ್ ಅಗರ್ವಾಲ್ ಮತ್ತು ಪ್ರೀತಿ ಎಂಬುವವರು ಕೇವಲ 30 ಸಾವಿರ ಆಸ್ಪತ್ರೆಗೆ ದಾಖಲಿಸಿ ಎಸ್ಕೇಪ್ ಆಗಿದ್ದಾರೆ.
ಇನ್ನೂ ಈ ಬಾಲಕನಿಗೆ ಸರ್ಜರಿ ಮಾಡದಿದ್ದರೆ ಪೂರ್ಣ ಕೈ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಆದ್ರೆ ಚಿಕಿತ್ಸೆಗೆ ಭರಿಸುವಷ್ಟು ಹಣ ಇಲ್ಲದೇ ಗಾಯಾಳು ನರಳುತ್ತಿದ್ದಾನೆ. ಕಾರ್ಖಾನೆಯಲ್ಲಿ ಐದಾರು ಮಂದಿ ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.