Accident: ಸ್ಟೇರಿಂಗ್ ಕಟ್ ಆಗಿ ಪಲ್ಟಿ ಹೊಡೆದ ಬಸ್: ಐವರು ಗಂಭೀರ!

0
Spread the love

ಚಿಕ್ಕಮಗಳೂರು:- ಜಿಲ್ಲೆಯ ಮೂಡಿಗೆರೆಯ ಬಿದರಹಳ್ಳಿಯಲ್ಲಿ ಸ್ಟೇರಿಂಗ್ ಕಟ್ ಆಗಿ ಬಸ್ ಪಲ್ಟಿ ಹೊಡೆದಿರುವ ಘಟನೆ ಜರುಗಿದೆ.

Advertisement

ಧರ್ಮಸ್ಥಳ ಪ್ರವಾಸಕ್ಕೆಂದು ಮೈಸೂರಿನ ಅಪೋಲೋ ಆಸ್ಪತ್ರೆಯ ಸಿಬ್ಬಂದಿ ತೆರಳುತ್ತಿದ್ದರು. ಈ ವೇಳೆ, ಬಸ್‍ನ ಸ್ಟೇರಿಂಗ್ ಕಟ್ ಆಗಿ ಡಿವೈಡರ್‌ಗೆ  ಡಿಕ್ಕಿಯಾಗಿ ಬಸ್ ಪಲ್ಟಿಯಾಗಿದೆ. ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here