ಗದಗ: ಪೆಟ್ರೋಲ್ ನಲ್ಲಿ ನೀರು ಪತ್ತೆಯಾಗಿರುವ ಘಟನೆ ಗದಗ ಬೆಟಗೇರಿಯ ಶರಣಬಸವೇಶ್ವರ ನಗರದ ಶ್ರೀಸಾಯಿ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ. ಬಾಟಲ್ ನಲ್ಲಿ ಪೆಟ್ರೋಲ್ ಹಾಕುವ ವೇಳೆಯಲ್ಲಿ ನೀರು ಪತ್ತೆಯಾಗಿದ್ದು, ಪೆಟ್ರೋಲ್ ಮಾಲೀಕರ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಟೀಫನ್ ಎನ್ನುವ ಗ್ರಾಹಕನ ಆರೋಪವಾಗಿದ್ದು, 90 ರೂಪಾಯಿ ಪೆಟ್ರೋಲ್ ಹಾಕಿಸಿದ್ರೆ, ಅದರಲ್ಲಿ ನೀರು ಪತ್ತೆಯಾಗಿದೆ. ಗ್ರಾಹಕರು ಪೆಟ್ರೋಲ್ ಮಾಲೀಕರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಘಟನೆ ಬಗ್ಗೆ ಪೆಟ್ರೋಲ್ ಮಾಲೀಕ ಮಹೇಶ್ ಕೋಟಿ ಮಾಹಿತಿ ನೀಡಿದ್ದು, ನೀರು ಬಂದಿದ್ದು ನಮ್ಮ ಗಮನಕ್ಕೆ ಬಂದಿದೆ. ನೀರು ಹೇಗೆ ಬಂದಿದೆ ಎನ್ನುವದು ಗೊತ್ತಿಲ್ಲ.
ಇದನ್ನು ಭಾರತ್ ಪೆಟ್ರೋಲಿಯಂ ಕಂಪನಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ಬಂದು ಚೆಕ್ ಮಾಡಲಿ, ಯಾಕೇ ನೀರು ಬಂದಿದೆ ಅಂತಾ. ನಾವು ನೀರು ಮಿಶ್ರಣ ಮಾಡಿಲ್ಲ ಎಂದು ಪೆಟ್ರೋಲ್ ಮಾಲೀಕರು ಮಾಹಿತಿ ನೀಡಿದ್ದಾರೆ.