ಗದಗ: ಕಳ್ಳರಿದ್ದಾರೆ ಅಂತಾ ಎಚ್ಚರಿಕೆ ನೀಡಿದಂತೆ ಮಾಡಿ ವೃದ್ಧನಿಂದ ಚಿನ್ನದ ರಿಂಗ್ ಸುಲಿಗೆ ಮಾಡಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊಪ್ಪಳ ರಸ್ತೆಯಲ್ಲಿ ನಡೆದಿದೆ.
ಕಾಶಪ್ಪ ಸತ್ಯಪ್ಪನವರ ಉಂಗುರು ಕಳೆದುಕೊಂಟ ವ್ಯಕ್ತಿಯಾಗಿದ್ದಾರೆ.
ಹೇಮರೆಡ್ಡಿ ಮಲ್ಲಮ್ಮ ನಗರದಿಂದ ಕೊಪ್ಪಳ ರಸ್ತೆಗೆ ವಾಕ್ ಬಂದಿದ್ದ ಕಾಶಪ್ಪ ಅವರನ್ನ ನೋಡಿ ಬೈಕ್ ನಿಲ್ಲಿಸಿ ಮಾತನಾಡಲು ಮುಂದಾಗಿದ್ದ ಸುಲಿಗೆಕೋರರು, ಕಳ್ಳತನ ಪ್ರಕರಣ ಜಾಸ್ತಿಯಾಗಿವೆ ಉಂಗುರ ಜೇಬಿನಲ್ಲಿಡಿ ಅಂತಾ ಹೇಳಿ ಯಾಮಾರಿಸಿದ್ದಾರೆ.
ಈ ವೇಳೆ ಉಂಗುರ ಬಿಚ್ಚಿ ತಮ್ಮ ಬಳಿ ಇದ್ದ ಪೇಪರ್ ನಲ್ಲಿ ಸುತ್ತಿ ಜೇಬಿಗೆ ಇಟ್ಟಂತೆ ನಾಟಕ ಮಾಡಿ ಪೇಪರ್ ನಲ್ಲಿ ಕಲ್ಲು ಸುತ್ತಿ ಕಿಸೆಗೆ ಹಾಕಿ ಎಸ್ಕೇಪ್ ಆಗಿದ್ದಾರೆ. ಮನೆಗೆ ಬಂದು ಪೇಪರ್ ಚೆಕ್ ಮಾಡಿದಾಗ ಕಲ್ಲು ಪತ್ತೆಯಾಗಿದ್ದು, ಅರ್ಧ ತೊಲೆ ಚಿನ್ನದ ಉಂಗುರ ಕಳ್ಳೆದುಕೊಂಡು ವೃದ್ಧ ಕಾಶಪ್ಪ ಹಾಗೂ ಪತ್ನಿ ಅಸಹಾಯಕರಾಗಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.