ಬೆಂಗಳೂರು: ಮುಡಾ ಹಗರಣ ನಡೆದಾಗ ನಾನು ಮಂತ್ರಿ ಆಗಿರಲಿಲ್ಲ. ಸೈಟನ್ನು ಪಡೆದಿಲ್ಲ, ಕೊಟ್ಟಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ನಗರದಲ್ಲಿ ಜಾರಿ ನಿರ್ದೇಶನಾಲಯದ ನೋಟಿಸ್ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ನೋಟಿಸ್ ಬಂದಾಗ ಆಶ್ಚರ್ಯ ಆಯ್ತು.
Advertisement
ಹಗರಣ ನಡೆದಾಗ ನಾನು ಮಂತ್ರಿ ಆಗಿರಲಿಲ್ಲ. ಸೈಟನ್ನು ಪಡೆದಿಲ್ಲ, ಕೊಟ್ಟಿಲ್ಲ. ಸೈಟ್ ಹಂಚಿಕೆ ಗೊಂದಲ ಆದ ಮೇಲೆ ಸೈಟ್ ವಾಪಸ್ ಕೂಡ ಕೊಟ್ಟಿದ್ದಾರೆ. ಇದೆಲ್ಲ ನ್ಯಾಯಮೂರ್ತಿಗಳಿಗೆ ಮನದಟ್ಟಾಗಿದೆ ಹಾಗಾಗಿ ಸ್ಟೇ ಕೊಟ್ಟಿದ್ದಾರೆ. ನನಗೆ ಕೊಟ್ಟಿರುವುದು ಒಂದೇ ನೋಟಿಸ್, ಸಿಎಂ ಪತ್ನಿಗೆ ಎರಡನೇ ನೋಟಿಸ್ ಕೊಟ್ಟಿದ್ದಾರಾ ಎಂದು ನನಗೆ ಗೊತ್ತಿಲ್ಲ ಎಂದರು.