ಬಿಗ್ ಬಾಸ್ ಸೀಸನ್ 11ರ ವಿನ್ನರ್ ಆಗಿ ಕುರಿಗಾಯಿ ಹನುಮಂತ ಹೊರ ಹೊಮ್ಮಿದ್ದಾರೆ.ಹನುಮಂತನ ಗೆಲುವು ಹಲವರಿಗೆ ಖುಷಿ ನೀಡಿದ್ದರೆ ಕೆಲವರಿಗೆ ಅಸಮಾಧಾನ ತರಿಸಿದೆ. ಈ ಮಧ್ಯೆ ಹನುಮಂತನ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ಹಂಸ ಹನುಮಂತನ ಗೆಲುವಿನ ಬಳಿಕ ಕ್ಷಮೆ ಕೇಳಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ್ದ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಹಂಸ,ಬಿಗ್‌ಬಾಸ್ ಮನೆಯಲ್ಲಿ ಹನುಮಂತ ಸಿಂಪತಿ ಕ್ರಿಯೇಟ್ ಮಾಡಿದ್ದಾರೆ, ಸರಳತೆ ನಾಟಕ ಆಡುತ್ತಿದ್ದಾರೆ, ದಲಿತಾ ಎನ್ನುವ ಜಾತಿ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಹಂಸ ಅವರ ಹೇಳಿಕೆಗೆ ಅನೇಕರು ಅಸಮಾಧಾನ ಹೊರ ಹಾಕಿದ್ದರು. ಜೊತೆಗೆ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಇದೀಗ ಕೊನೆಗೂ ಹಂಸ ತಾವಾಡಿದ ಮಾತಿಗೆ ಕ್ಷಮೆ ಕೇಳಿದ್ದಾರೆ.
‘ನಾನು ಒಂದು ಚಾನೆಲ್‌ನಲ್ಲಿ ಕೊಟ್ಟ ಸ್ಟೇಟ್‌ಮೆಂಟ್ ತುಂಬಾ ವಿವಾದ ಸೃಷ್ಟಿ ಮಾಡಿದೆ. ಕೆಲವರು ಅದನ್ನು ಬೇರೆ ರೀತಿ ಅರ್ಥೈಸಿಕೊಂಡು ಬೇರೆ ಬೇರೆ ತಿರುವುಗಳನ್ನು ಕೊಡುತ್ತಿದ್ದಾರೆ. ಖಂಡಿತವಾಗಿಯೂ ನನ್ನ ಮಾತಿನ ಅರ್ಥ ಅದಾಗಿರಲಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ಬೇಸರ ಆಗಿದ್ದರೆ ಅವರಿಗೆಲ್ಲಾ ನಾನು ಕ್ಷಮೆ ಕೇಳುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ, ದೊಡ್ಡ ಮನಸ್ಸು ಮಾಡಿ ನನ್ನ ಮಾತುಗಳನ್ನು ಮರೆತುಬಿಡಿ. ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡಿ’ ಎಂದು ಸೋಷಿಯಲ್ ಮೀಡಿಯಾದ ಮೂಲಕ ಹಂಸ ಮನವಿ ಮಾಡಿದ್ದಾರೆ.