ಬೆಂಗಳೂರು:- ಜನಪ್ರತಿನಿಧಿಗಳು ಹಾಗೂ ಉದ್ಯಮಿಗಳಿಗೆ ವಂಚಿಸಿದ್ದ ಆರೋಪದಡಿ ಮಹಿಳೆ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಾಲ ಕೊಡಿಸುವ ನೆಪದಲ್ಲಿ ರೇಖಾ ಎಂಬುವರು ಆನೇಕ ಜನರಿಗೆ ನೂರಾರು ಕೋಟಿ ವಂಚನೆ ಮಾಡಿರುವುದು ಇದೀಗ ಬಟಾ ಬಯಲಾಗಿದೆ. ಐಶ್ವರ್ಯಾಗೌಡ, ಶ್ವೇತಾಗೌಡ ವಂಚನೆ ಪ್ರಕರಣ ಮಾಸುವ ಮುನ್ನವೇ ಈ ವಂಚನೆ ಬೆಳಕಿಗೆ ಬಂದಿದ್ದು, ಆತಂಕ ಉಂಟು ಮಾಡಿದೆ.
2023ರಲ್ಲಿ ಉದ್ಯಮಿಗೂ ಮತ್ತು ರೇಖಾಗೂ ಪರಿಚಯವಾಗುತ್ತದೆ. ಕಾರ್ಲ್ಟನ್ ಟವರ್ ಬೆಂಕಿ ದುರಂತದ ಕತೆ ಹೇಳುವ ಮೂಲಕ ಮೋಸದ ಜಾಲ ಬೀಸಿದ ರೇಖಾ, ನಾನು ಟವರ್ ದುರಂತದ ಪ್ರತ್ಯಕ್ಷ ಸಾಕ್ಷಿ, ನಾನು ಸಾಕ್ಷಿ ಹೇಳದಂತೆ ಮಾಲೀಕರು ಆಫರ್ ಮಾಡಿದ್ದಾರೆ.
25 ಕೋಟಿ ರೂ. ಕೊಡುತ್ತೇನೆ ಅಂದಿದ್ದಾರೆ. ನನ್ನ ಖಾತೆಯಲ್ಲಿದ್ದ 6 ಕೋಟಿ ರೂ. ಇದೆ. ಹೀಗಾಗಿ, ಇಡಿ ಮತ್ತು ಐಟಿ ನನ್ನ ಖಾತೆ ಸೀಜ್ ಮಾಡಿವೆ. ಆದರೆ, ಹಣ ರಿಲೀಸ್ ಮಾಡಿಸಲುಕೆ ನನಗೆ ಹಣ ಬೇಕಾಗಿದೆ ಅಂತ ಉದ್ಯಮಿಯನ್ನು ನಂಬಿಸಿ 5.75 ಕೋಟಿ ರೂ. ಪಡೆದಿದ್ದಾಳೆ.
ಉದ್ಯಮಿಯೊಬ್ಬರಿಗೆ 25 ಕೋಟಿ ರೂ. ಆಸೆ ತೋರಿಸಿ, ಬರೋಬ್ಬರಿ 5.75 ಕೋಟಿ ರೂ. ವಂಚಿಸಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಆರೋಪಿ ರೇಖರನ್ನು ಬಂಧಿಸಿದ್ದಾರೆ.