ಹುಬ್ಬಳ್ಳಿ: ಗಂಗಾ ಸ್ನಾನ ಮಾಡಿದ ತಕ್ಷಣ ಮೋದಿ, ಅಮಿತ್ ಶಾ ಪಾಪ ಹೋಗಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗಂಗಾ ಸ್ನಾನ ಮಾಡಿದ ತಕ್ಷಣ ಪಾಪ ಹೋಗಲ್ಲ.
Advertisement
ಈ ದೇಶದ ಆರ್ಥಿಕ ವ್ಯವಸ್ಥೆ ಮೂಲೆಗುಂಪಾಗಿದ್ದು ಪಾಲಿಸಿ ಹಾಳು ಮಾಡಿರೋದು ಪಾಪ ಅಲ್ವಾ? ಎರಡು ಲಕ್ಷ ಕಿರಾಣಿ ಅಂಗಡಿಗಳು ಮುಚ್ಚಿ ಹೋಗಿವೆ. ಇದನ್ನು ಯಾರಾದರೂ ಮಾತಾಡ್ತಾರಾ? ಖರ್ಗೆ ಸಾಹೇಬರು ಹೇಳಿದ್ದು ಸರಿ ಇದೆ. ಪಾಪ ಮಾಫಿ ಆಗಲ್ಲ ಎಂದು ಹೇಳೀದ್ದಾರೆ.
ಇನ್ನೂ ಬಿಜೆಪಿಯವರು ದೇಶದ ಸಾಲದ ಬಗ್ಗೆ ಯಾಕೆ ಮಾತಾಡಲ್ಲ. ಲೋಕಪಾಲ್ ಗೆ ಗೌರವ ಕೊಟ್ಟಂತೆ, ನಾವು ಲೋಕಾಯುಕ್ತ ಸಂಸ್ಥೆ ನಂಬುತ್ತೇವೆ. ಹೊಸತನದ ರಾಜಕೀಯ ಬರಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದರು. ವಾಟ್ಸಪ್ ಯುನಿವರ್ಸಿಸಿ ಫೈನಲ್ ಅಲ್ಲ. ಯುವ ಜನತೆ ಅರ್ಥ ಮಾಡಿಕೊಳ್ಳಬೇಕು. ದೇಶ ಬಿಜೆಪಿ ಕಾಂಗ್ರೆಸ್ ನವರ ಸ್ವತ್ತಲ್ಲ ಎಂದರು.