ಮಂಡ್ಯ: ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಸವಾರ ಸಾವನ್ನಪ್ಪಿರುವ ಘಟನೆ ಮಂಡ್ಯದ ಮದ್ದೂರು ತಾಲೂಕಿನ ನಗರಕೆರೆ ಬಳಿ ತಡರಾತ್ರಿ ನಡೆದಿದೆ. ನಗರಕೆರೆ ಗ್ರಾಮದ ವೈದ್ಯಸ್(28) ಮೃತ ಸವಾರನಾಗಿದ್ದು, ಮದ್ದೂರಿನಿಂದ ತಡರಾತ್ರಿ ಬರಬೇಕಾದ್ರೆ ಈ ದುರ್ಘಟನೆ ಸಂಭವಿಸಿದೆ.
Advertisement
ಸ್ಥಳಕ್ಕೆ ಮದ್ದೂರು ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತನ ದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಮದ್ದೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.