ಭಾರತ ತಂಡ ರಾಜ್ಕೋಟ್ನಲ್ಲಿ ನಡೆದ 3ನೇ ಟಿ20ಯಲ್ಲಿ 26ರನ್ಗಳ ಹೀನಾಯ ಸೋಲು ಕಂಡಿದೆ. ಇಂಗ್ಲೆಂಡ್ ನೀಡಿದ್ದ 172ರನ್ಗಳ ಗುರಿಯನ್ನ ಬೆಟ್ಟಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 145ರನ್ಗಳಲಷ್ಟೆ ಶಕ್ತವಾಗಿ ಸೋಲು ಕಂಡಿತು. ಇನ್ನೂ ಟೀಮ್ ಇಂಡಿಯಾ ಸೋಲಿನ ಬಗ್ಗೆ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಮಾತನಾಡಿದ್ದಾರೆ.
ಪಂದ್ಯದ ಸಂಪೂರ್ಣ ಕ್ರೆಡಿಟ್ ಎದುರಾಳಿ ಸ್ಪಿನ್ನರ್ ಆದಿಲ್ ರಶೀದ್ ಅವರಿಗೆ ನೀಡಿದರು. ನಾವು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದಾಗ, ದ್ವಿತೀಯ ಇನಿಂಗ್ಸ್ ವೇಳೆ ಇಬ್ಬನಿ ಇರಲಿದೆ ಎಂದು ಭಾವಿಸಿದ್ದೆವು. ಆದರೆ ನಮ್ಮ ನಿರೀಕ್ಷೆ ಹುಸಿಯಾಯಿತು.
ಇದಾಗ್ಯೂ ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುವಾಗ ನಾವು ಗೆಲ್ಲುವ ವಿಶ್ವಾಸವಿತ್ತು. ಆದರೆ ಈ ಹಂತದಲ್ಲಿ ಅದ್ಭುತ ಬೌಲಿಂಗ್ ಸಂಘಟಿಸುವಲ್ಲಿ ಆದಿಲ್ ರಶೀದ್ ಯಶಸ್ವಿಯಾದರು. ಇಂತಹ ಬೌಲಿಂಗ್ ಸಂಘಟಿಸುವುದರಿಂದಲೇ ಅವರು ವಿಶ್ವ ದರ್ಜೆಯ ಬೌಲರ್ ಆಗಿದ್ದಾರೆ. ಹೀಗಾಗಿ ಇಂಗ್ಲೆಂಡ್ ಗೆಲುವಿನ ಶ್ರೇಯಸ್ಸು ಆದಿಲ್ ರಶೀದ್ ಅವರಿಗೆ ಸೇರಬೇಕು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಏಕೆಂದರೆ ಆದಿಲ್ ರಶೀದ್ ಯಾವುದೇ ಹಂತದಲ್ಲೂ ನಮಗೆ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಪರಿಣಾಮ ರನ್ಗಳಿಕೆಯನ್ನು ನಮ್ಮ ಬ್ಯಾಟರ್ಗಳು ಹಿಂದುಳಿದೆವು. ಈ ಸೋಲಿನ ಹೊರತಾಗಿಯೂ ನಾವು ಪ್ರತಿ ಪಂದ್ಯದಿಂದಲೂ ಏನಾದರೂ ಕಲಿಯುತ್ತೇವೆ. ಈ ಪಂದ್ಯದ ಮೂಲಕ ಬ್ಯಾಟಿಂಗ್ ಮತ್ತಷ್ಟು ಉತ್ತಮಗೊಳಿಸಬೇಕೆಂದನ್ನು ಅರಿತುಕೊಂಡಿದ್ದೇವೆ ಎಂದು ಟೀಮ್ ಇಂಡಿಯಾ ನಾಯಕ ಹೇಳಿದ್ದಾರೆ.