ತುಮಕೂರು: ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ಹೆಚ್ಚಾಗಿದೆ. ಒಂದು ತಿಂಗಳು ಕಂತು ಕಟ್ಟುವುದು ತಪ್ಪಿದರೂ ಮನೆ ಬಳಿ ಬಂದು ಟಾರ್ಚರ್ ಕೊಡುತ್ತಿದ್ದಾರೆ. ಹೀಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಟಾರ್ಚರ್ ತಾಳಲಾರದೇ ರಾಜ್ಯದಲ್ಲಿ ಈವರೆಗೂ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮನಗರ, ರಾಯಚೂರು, ಬೆಳಗಾವಿಯಲ್ಲಿ ಒಬ್ಬೊಬ್ಬರು ಸಾವಿಗೆ ಶರಣಾಗಿದ್ದಾರೆ. ಕೆಲವೆಡೆ ಸಾಲ ಕೊಟ್ಟವರ ಕಾಟ ತಡೆಯಲಾಗದೇ ಮನೆಗೆ ಬೀಗ ಹಾಕಿಕೊಂಡು ಊರು ತೊರೆದಿದ್ದಾರೆ.
ಇದೀಗ ತುಮಕೂರಿನಲ್ಲಿ ಕೂಡ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಜಿಲ್ಲೆಯ ಕೊರಟಗೆರೆ ತಾಲ್ಲೂಕಿಮ ಅಲ್ಲಾಳಸಂದ್ರ ಹನುಮಂತಪುರದಲ್ಲಿ ನಡೆದಿದೆ. ಮಂಗಳಮ್ಮ(45) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯಾಗಿದ್ದು, ಒಂದು ವರ್ಷ ಹಿಂದೆ ಹೋಟೆಲ್ ಮಾಡಲು ಅನೇಕ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದಿದ್ದರು,
ಸಾಲ ತೀರಿಸಲು ಮಂಗಳಮ್ಮ ಹಾಗೂ ಗಂಡ ಬಸವರಾಜು, ಮಗ ಪುನೀತ್ ಹರಸಾಹಸ ಪಟ್ಟಿದ್ದು, 42 ಕಂತು ಹಣ ಬಾಕಿ ಇದ್ದು, ಗ್ರಾಮೀಣ ಕೂಟಕ್ಕೆ ಸಾಲದ ಕಂತು ಇಂದು ಕೊಡಬೇಕಾಗಿತ್ತು..ಆದ್ರೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಎರಡು ದಿನದಿಂದ ಮನೆ ಮುಂದೆ ಗಲಾಟೆ ಮಾಡಿದ್ದರು. ಇದರಿಂದ ಬೇಸತ್ತ ಮಂಗಳಮ್ಮ 30 ಬಿಪಿ ಮಾತ್ರೆಗಳನ್ನ ನುಂಗಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಸ್ಥಳೀಯರು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಐಸಿಯು ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.