ಸಂಗೊಳ್ಳಿ ರಾಯಣ್ಣನ ಆದರ್ಶಗಳನ್ನು ಪಾಲಿಸೋಣ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಬ್ರಿಟಿಷರ ವಿರುದ್ಧ ಸಮರ ಸಾರಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುಣ್ಯಸ್ಮರಣೆ ನಿಮಿತ್ತ ಕ್ರಾಂತಿ ಸೇನಾ ಗದಗ ಜಿಲ್ಲಾ ಸಂಘಟನೆ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ ಗದಗ ನಗರದ ಶ್ರೀ ಕಿತ್ತೂರಾಣಿ ಚೆನ್ನಮ್ಮ ಸರ್ಕಲ್‌ನಿಂದ ಪ್ರಾರಂಭವಾಗಿ ಗದಗ-ಬೆಟಗೇರಿ ನಗರಸಭೆ ಮುಂಭಾಗದ ರಾಯಣ್ಣನವರ ಪುತ್ಥಳಿಯವರೆಗೆ ನೆರವೇರಿತು.

Advertisement

ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಗದಗ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರವೀಣ ಹಬೀಬ ಮಾತನಾಡಿ, ರಾಯಣ್ಣನಿಗೆ ರಾಯ, ನಾಯಕ, ವೀರ ಸಂಗೊಳ್ಳಿ ರಾಯಣ್ಣ, ಕ್ರಾಂತಿವೀರ ರಾಯಣ್ಣ ಇತ್ಯಾದಿ ಹೆಸರಿಸಲ್ಪಟ್ಟಿವೆ. ಇಂತಹ ಕ್ರಾಂತಿಕಾರಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರನ್ನು ಮನದಲ್ಲಿ ಸ್ಮರಿಸುವ, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಗದಗ ತಾಲೂಕಾಧ್ಯಕ್ಷ ಭರತ್ ಮಾರೆಪ್ಪನವರ್, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಕುಂಬಾರ್, ಕಾರ್ಯದರ್ಶಿ ಪವನ್ ಪುರದ್, ಗದಗ ಜಿಲ್ಲಾ ಮಹರ್ಷಿ ವಾಲ್ಮೀಕಿ ಗಜಪಡೆ ಟ್ರಸ್ಟ್ ಅಧ್ಯಕ್ಷ ಕಿರಣ್ ನಾಯ್ಕರ್, ಪ್ರದೀಪ್ ಸರ್ವದೆ, ಕಿರಣ್ ಪಟ್ಟಣಶೆಟ್ಟಿ, ನಾರಾಯಣ ಭಾಂಡಗೆ, ರಾಮು ಗಡಾದ್, ಬಸವರಾಜ ಅಸುಂಡಿ, ಈಶ್ವರ್ ಹಾಗೂ ಬಿಜೆಪಿ ಮುಖಂಡ ಗುರು ಬಾಂಡಗೆ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here