ವಿಜಯಸಾಕ್ಷಿ ಸುದ್ದಿ, ಗದಗ: ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಅವರ ಆತ್ಮಹತ್ಯೆಯನ್ನು ಖಂಡಿಸಿ ನಗರದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಗದಗ ಜಿಲ್ಲಾ ಘಟಕ ವತಿಯಿಂದ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಮಹಾಸಭಾದ ಅಧ್ಯಕ್ಷ ದೇವೇಂದ್ರಪ್ಪ ಬಡಿಗೇರ ಮಾತನಾಡಿ, ಪ್ರಥಮ ದರ್ಜೆ ಗುತ್ತಿಗೆದಾರರಾದ ಸಚಿನ್ ಪಂಚಾಳರವರ ನಿಗೂಢವಾಗಿ ಸಾವನಪ್ಪಿರುವುದು ಸಂಶಯಾಸ್ಪದವಾಗಿದೆ. ಸರಕಾರ ಕೂಡಲೇ ಎಚ್ಚೆತ್ತು ಸಂತ್ರಸ್ತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಅವರ ಕುಟುಂಬ ವರ್ಗಕ್ಕೆ ಸೂಕ್ತ ಭದ್ರತೆ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಮಣ್ಣ ಶಂ.ಕಮ್ಮಾರ, ದಿವಾಕರ ಬಡಿಗೇರ, ಮೃತ್ಯುಂಜಯ ಬಡಿಗೇರ, ಮೌನೇಶ ಬಡಿಗೇರ, ವೀರಭದ್ರಪ್ಪ ಕಮ್ಮಾರ, ಕಾಳಪ್ಪ ಬಡಿಗೇರ, ದೇವಪ್ಪ ಬಡಿಗೇರ, ಅಶೋಕ ಕಮ್ಮಾರ, ಕಾಳಪ್ಪ ಬಡಿಗೇರ ಯಳವತ್ತಿ, ವೀರಣ್ಣ ಬಡಿಗೇರ, ಮೌನೇಶ ಪತ್ತಾರ, ಮಹೇಶ ಬಡಿಗೇರ, ಹನುಮಂತಪ್ಪ ಬಡಿಗೇರ, ಆನಂದ ಕಮ್ಮಾರ, ಕೇಶಪ್ಪ ಕಮ್ಮಾರ, ಕಲ್ಲಪ್ಪ ಪತ್ತಾರ, ಶರಣಬಸಪ್ಪ ಬಡಿಗೇರ, ಬಸವರಾಜ ಕಮ್ಮಾರ, ಮಹಾಲಿಂಗಪ್ಪ ಬಡಿಗೇರ, ನಾಗಲಿಂಗಪ್ಪ ಬಡಿಗೇರ, ವಿರೇಶ ಬಡಿಗೇರ, ಶೇಖಪ್ಪ ಪತ್ತಾರ, ಶಿವಪ್ಪ ಶಿರೂರ, ಮಂಜುನಾಥ ಬಡಿಗೇರ, ಮಾನಪ್ಪ ಬಡಿಗೇರ, ಚಂದ್ರಶೇಖರ ಪತ್ತಾರ, ಈರಣ್ಣ ಕಂಚಗಾರ, ದೇವಪ್ಪ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.