ಮೈಸೂರು: ಹಿಂದೂಗಳ ನಂಬಿಕೆಗಳಿಗೆ ಘಾಸಿ ಮಾಡುವುದೇ ಕಾಂಗ್ರೆಸ್ʼನ ಉದ್ದೇಶ ಎಂದು ಸಿಟಿ ರವಿ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಹಿಂದುಗಳ ನಂಬಿಕೆಗಳಿಗೆ ಘಾಸಿ ಮಾಡುವುದೇ ಕಾಂಗ್ರೆಸ್‌ನ ಉದ್ದೇಶ, ಏಕೆಂದರೆ ನಾವು ತಾಲಿಬಾನಿಗಳ ರೀತಿ ಅವರಿಗೆ ಉತ್ತರ ಕೊಡುವುದಿಲ್ಲ, ತಾಲಿಬಾನಿಗಳ ರೀತಿ ಪ್ರತಿಕ್ರಿಯಿಸಿದರೆ ಹಿಂದೆ ಮುಂದೆ ಮುಚ್ಚಿಕೊಂಡಿರುತ್ತಾರೆ.
Advertisement
ತಾಲಿಬಾಲಿನಿಗಳು ತಮ್ಮ ಧಾರ್ಮಿಕ ನಂಬಿಕೆಗೆ ಘಾಸಿಯಾದ್ರೆ ತಲ್ವಾರ್ ಎತ್ತುತ್ತಾರೆ. ನಾವು ಹಿಂದುಗಳು ದುಷ್ಟರನ್ನ ಕಂಡರೇ ದೂರ ಇರಿ ಎಂಬ ರೀತಿ ಇದ್ದು ಬಿಡುತ್ತೇವೆ ಹೀಗಾಗಿ ಕಾಂಗ್ರೆಸ್ ನವರು ಪದೇ ಪದೇ ನಮ್ಮ ಧಾರ್ಮಿಕ ನಂಬಿಕೆಗೆ ಘಾಸಿ ಮಾಡುತ್ತಿದ್ದಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಮೊದಲು ಈ ರೀತಿ ಇರಲಿಲ್ಲ, ಮೊದಲು ಇದೇ ರೀತಿ ಇದಿದ್ದರೇ 8 ಬಾರಿ ಅವರು ಗೆಲ್ಲುತ್ತಿರಲಿಲ್ಲ. ಈಗ ಕಾಂಗ್ರೆಸ್ ಪಕ್ಷ ತಮ್ಮ ನಿಲ್ಲುವನ್ನು ಅವರ ಬಾಯಿಯಿಂದ ಹೇಳಿಸುತ್ತಿದೆ ಎಂದು ಹೇಳಿದರು.