ಕೊಪ್ಪಳ:- ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿ ಹದಿನೇಳು ವರ್ಷದ ಯುವಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜರುಗಿದೆ.
Advertisement
ಮೃತ ಯುವಕನನ್ನು ಜಯೇಶ್ ಯಾದವ್ ಎಂದು ಗುರುತಿಸಲಾಗಿದೆ. ಸ್ನೇಹಿತರೊಂದಿಗೆ ಅಂಜನಾದ್ರಿ ಬೆಟ್ಟ ಹತ್ತಿ ಇನ್ನೇನು ದರ್ಶನ ಪಡೆಯಬೇಕು ಎನ್ನುವಷ್ಟರಲ್ಲೇ ಹೃದಯಾಘಾತವಾಗಿದೆ.
ಗಂಗಾವತಿ ತಾಲೂಕಿನ ಸುಪ್ರಸಿದ್ದ ಅಂಜನಾದ್ರಿ ಬೆಟ್ಟಕ್ಕೆ ಜಯೇಶ್ ಹೋಗಿದ್ದ. ಮಧ್ಯಾಹ್ನ ಎರಡು ಗಂಟೆ ಸಮಯದಲ್ಲಿ 575 ಮೆಟ್ಟಿಲುಗಳನ್ನು ಹತ್ತಿ, ಆಂಜನೇಯನ ದರ್ಶನಕ್ಕೆ ಜಯೇಶ್ ಹೋಗುತ್ತಿದ್ದ. ಆದ್ರೆ ಅರ್ಧ ಬೆಟ್ಟ ಹತ್ತಿದಾಗಲೇ ದಿಢೀರನೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಆಸ್ಪತ್ರೆಗೆ ತಲುಪುವ ಮುನ್ನವೇ ಜಯೇಶ್ ಉಸಿರು ನಿಂತು ಹೋಗಿತ್ತು. ಹೃದಯಾಘಾತದಿಂದ ಜಯೇಶ್ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದದಾರೆ.
ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.